Ankola| ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಬೆಳಸೆ ಬಳಿ ಕಾರು ಪಲ್ಟಿಯಾಗಿ ಯುವತಿಯೊಬ್ಬಳು ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ.

ತಮಿಳುನಾಡು ಮೂಲದ ಸದ್ಯ ಅಮೆರಿಕದಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ರುಜುಲಾ ಎಂ ( 26) ಎಂಬುವವಳೆ ಸಾವನ್ನಪ್ಪಿದ ಯುವತಿ‌‌. ಇನ್ನು ಕಾರಿನ ಚಾಲಕ ಶರಣ್ ಪಾಂಡ್ಯ, ಮೃತ ಯುವತಿಯ ಸಹೋದರ ಅಕ್ಷಯ ಎಂ.(23), ಹರಿಹರನ ಸುಂದರ್ ಪಿ., ವಿಘ್ನೇಶ್ ಅಣ್ಣದೊರೈ ಇವರಿಗೆ ಗಾಯಗಳಾಗಿವೆ.

ತಮಿಳುನಾಡು ನೊಂದಣಿ ಹೊಂದಿರುವ ಕಾರು ಅಂಕೋಲಾದಿಂದ ಕುಮಟಾ ಕಡೆಗೆ ಸಾಗುತ್ತಿತ್ತು. ಬೆಳಸೆ ಬಳಿ ಕಾರು ದನವನ್ನು ತಪ್ಪಿಸಲು ಹೋಗಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಗಾಯಾಳುಗಳನ್ನು ಅಂಕೋಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಕೋಲಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.