Karwar| ನಗರ ಹಾಗೂ ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಪದೇ ಪದೇ ವಿದ್ಯುತ್ ಕಡಿತ ವಿರೋಧಿಸಿ ಇಂದು ಶನಿವಾರ ಭಾರತೀಯ ಜನತಾ ಪಕ್ಷ ಕಾರವಾರ ನಗರ ಹಾಗೂ ಗ್ರಾಮೀಣ ಮಂಡಲ ವತಿಯಿಂದ ಹೆಸ್ಕಾಂ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಹಲವು ದಿನಗಳಿಂದ ಕಾರಣ ನೀಡದೆ, ಹಗಲು ರಾತ್ರಿ ಎನ್ನದೆ, ಮುನ್ಸೂಚನೆ ನೀಡದೆ ಹಠಾತಾಗಿ ವಿದ್ಯುತ್ತನ್ನು ಕಡಿತುಗೊಳಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದರಿಂದ ಈ ಎಲ್ಲಾ ಸಮಸ್ಯೆ ಉದ್ಭವವಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಸಾರ್ವಜನಿಕರಿಗೆ ತೊಂದರೆ ಮುಂದುವರೆದರೆ ಉಗ್ರ ಹೋರಾಟ ಮಾಡುವುದಾಗಿ ಹೆಸ್ಕಾಂ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರಿಗೇ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ನಗರ ನಾಗೇಶ್ ಕುರುಡೇಕರ್ ಹಾಗೂ ಗ್ರಾಮೀಣ ಮಂಡಳ ಅಧ್ಯಕ್ಷ ಸುಭಾಷ್ ಗುನಗಿ ಜಿಲ್ಲಾ ಬಿಜೆಪಿಯ ಉಪಾಧ್ಯಕ್ಷ ಸಂಜಯ್ ಸಾಳಂಕೆ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಕಿಶನ್ ಕಾಂಬಳೆ, ಪ್ರಮುಖರಾದ ಮನೋಜ್ ಭಟ್, ಸುನಿಲ್ ಸೋನಿ, ಮಾಜಿ ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ್, ಸೂರಜ್ ದೇಸಾಯಿ, ದೇವಿದಾಸ್ ಕಂತ್ರಿಕರ್, ಶುಭಂ ಕಳಸ್, ಸತೀಶ್ ತಳೆಕರ್, ಉಲ್ಲಾಸ್ ಕೆಣಿ, ವೈಶಾಲಿ ತಾಂಡೆಲ್, ರೇಷ್ಮಾ ಮಾಳಶೇಖರ್, ಅನುಶ್ರೀ ಕುಪಡೆ, ಮಾಜಿ ನಗರಸಭೆ ಸದಸ್ಯರು, ಬಿಜೆಪಿ ಪ್ರಮುಖರು, ಮುಖಂಡರು, ಮಹಿಳಾ ಮೋರ್ಚಾದವರು, ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.