Karwar|Majali| ಮಾಜಾಳಿ‌ ಸಮೀಪದ‌ ಹಿಪ್ಪಳಿಯ ಸಮುದ್ರ ತೀರದಲ್ಲಿ ಅಂದರ್‌ ಬಾಹರ್ ಆಡುತ್ತಿದ್ದ ವೇಳೆ‌ ದಾಳಿ ನಡೆಸಿದ ಪೋಲಿಸರು ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ.

ಚಿತ್ತಾಕುಲ ಪೊಲೀಸ್ ಠಾಣೆಯ ಪಿಎಸ್‌ಐ ಪರಶುರಾಮ ಮಿರ್ಜಿಗಿ ನೇತೃತ್ವದ ಪೊಲೀಸ್ ತಂಡ ಗಸ್ತು ನಡೆಸುತ್ತಿದ್ದ ವೇಳೆ, ಹಿಪ್ಪಳಿ ಭಾಗದ ಸಮುದ್ರ ತೀರದಲ್ಲಿ ಗಿಡಗಂಟಿಗಳ ಮಧ್ಯೆ ಕೆಲವರು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಗುಂಪಾಗಿ ಕುಳಿತು ಹಣವನ್ನು ಪಂಥವಾಗಿ ಕಟ್ಟಿ ‘ಅಂದರ್-ಬಾಹರ್’ ಆಡುತ್ತಿರುವುದು ಪತ್ತೆಯಾಗಿದೆ.

ತಕ್ಷಣ ದಾಳಿ ನಡೆಸಿದ ಪೊಲೀಸರು ದಾಮು ಅಂಕೋಲೆಕರ್ (45), ಜಗದೀಶ ಗುರಾವ್ (50), ಅನಿಲ್ ಮಾಜಾಳಿಕರ್ (44), ದೇವಿದಾಸ ನಾಯ್ಕ (66), ಸಂತೋಷ ಮಾಜಾಳಿಕರ್ (41), ಪ್ರಕಾಶ ಕಾಣಕೋಣಕರ್ (43), ಸಂತೋಷ ಉರುವಲೆ (53), ದಿನಕರ ತಾರೇಕರ್ (50) ಹಾಗೂ ರವಿ ಸೈಲ್ (57) ಅವರನ್ನು ಬಂಧಿಸಿದರು.

ಬಂಧಿತರಿಂದ ₹9,970 ನಗದು, ಎರಡು ಮೇಣಬತ್ತಿ ಹಾಗೂ ಒಂದು ಬಟ್ಟೆಯ ಹಾಸಿಗೆಯನ್ನು ವಶಪಡಿಸಿಕೊಳ್ಳಲಾಗಿದೆ.

ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.