ಕಾರವಾರ: ಬೈಕ್ ಅಪಘಾತದಲ್ಲಿ ಕಾರವಾರ  ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಗೋವಾದ ಲೋಳೆಂ‌ ಬಳಿ ಸೋಮವಾರ ತಡರಾತ್ರಿ ನಡೆದಿದೆ.

ಚಿತ್ರದುರ್ಗ ಮೂಲದ ಪ್ರೀತಂ ಮೃತ‌ ವಿದ್ಯಾರ್ಥಿ. ಈತ ಕಾರವಾರದ ಮೆಡಿಕಲ್ ಕಾಲೇಜಿನ ಮೂರನೇಯ ವರ್ಷದ‌ ವಿದ್ಯಾರ್ಥಿ.

 ಮೃತ ವಿದ್ಯಾರ್ಥಿ ಪ್ರೀತಂ

ಗಾಯಗೊಂಡ ವಿದ್ಯಾರ್ಥಿ ಬಸವರಾಜ್ ಎಂದು ತಿಳಿದುಬಂದಿದ್ದು, ಇಬ್ಬರು‌ ವಿದ್ಯಾರ್ಥಿಗಳು ಊಟಕ್ಕಾಗಿ ಕಾರವಾರದಿಂದ ಗೋವಾದ ಪೋಳೆಂ ಕಡೆಗೆ ತೆರಳಿದ್ದರು ಎನ್ನಲಾಗಿದೆ.  ತಡರಾತ್ರಿ ಊಟ ಮುಗಿಸಿ ವಾಪಸ್ ಕಾರವಾರದತ್ತ ಬರುತ್ತಿದ್ದ ವೇಳೆ  ಪೋಳೆಂನ ಕ್ಲೌಡ್ 9 ಹೊಟೆಲ್ ಬಳಿ ಈ ದುರ್ಘಟನೆ ನಡೆದಿದೆ.

(ಗಾಯಾಳು ಬಸವರಾಜ್)

ಇನ್ನೋರ್ವ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗೋವಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.