Honavar| ಕಳ್ಳತನ ಪ್ರಕರಣ ದಾಖಲಾದ ಕೇವಲ ಹನ್ನೆರಡು ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವ ಮೂಲಕ ಹೊನ್ನಾವರ ಪೊಲೀಸರು ಚುರುಕುತನ ಮೆರೆದಿದ್ದಾರೆ.

ಫೆಬ್ರವರಿ 23ರ ಬೆಳಿಗ್ಗೆ 10 ಗಂಟೆಯಿಂದ ಮಾರ್ಚ್ 4ರ ಮಧ್ಯಾಹ್ನ 2 ಗಂಟೆಯ ನಡುವಿನ ಅವಧಿಯಲ್ಲಿ ಹೊನ್ನಾವರ ತಾಲೂಕಿನ ಉಪ್ಪೋಣಿಯಲ್ಲಿರುವ ಗೋಡೌನ್‌ನಲ್ಲಿ ಇಡಲಾಗಿದ್ದ ಸುಮಾರು ₹89,000 ಮೌಲ್ಯದ ವಸ್ತುಗಳು ಕಳ್ಳತನವಾಗಿದ್ದವು. ಕಳ್ಳರು ಹೊಸ ಹಾಗೂ ಹಳೆಯ ವೈರ್ ಬಂಡಲ್‌ಗಳು, ಪ್ಲವರ್ ಪಾಟ್ ಹಾಗೂ ಫೈಬರ್ ಟ್ಯೂಬ್ ಲೈಟ್‌ಗಳನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಕುರಿತು ಮಾರ್ಚ್ 16ರಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದ್ದು, ತಕ್ಷಣವೇ ತನಿಖೆ ಆರಂಭಿಸಲಾಯಿತು.

ಖಚಿತ ಮಾಹಿತಿಯ ಮೇರೆಗೆ ಅದೇ ದಿನ ಪೊಲೀಸರು ಕಾರ್ಯಾಚರಣೆ ನಡೆಸಿ ದಾಸಗೋಡ, ಸಂಶಿ ಗ್ರಾಮದ ನಿವಾಸಿಗಳಾದ ಅಬ್ದುಲ್ ವಾಜೀದ್ ಹಾಗೂ ಅಪ್ತಾಬ್ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಅವರು ಕಳ್ಳತನ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ.

ಬಂಧಿತರಿಂದ ಸುಮಾರು ₹65,000 ಮೌಲ್ಯದ ಕಳವು ವಸ್ತುಗಳನ್ನು ಹಾಗೂ ಕಳ್ಳತನಕ್ಕೆ ಬಳಸಿದ ಪಲ್ಸರ್ ಮೋಟಾರ್ ಸೈಕಲ್‌ನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ನಂತರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

PSI ಮಹಾಂತೇಶ ವಾಲ್ಮೀಕಿ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸಿದ ಪೊಲೀಸ್ ತಂಡದ ಗಜಾನನ ನಾಯ್ಕ, ಮನೋಜ್ ಡಿ. ಮತ್ತು ರವಿ ನಾಯ್ಕ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.