Honavar| ತಾಲೂಕಿನ ಹೆರಂಗಡಿ ಸಮೀಪ KSRTC ಬಸ್‌ ಹಾಗೂ ಓಮಿನಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓಮಿನಿ ಚಾಲಕ  ಮೃತಪಟ್ಟಿರುವ ಧಾರುಣ ಘಟನೆ ರವಿವಾರ ಸಾಯಂಕಾಲ ಸಂಭವಿಸಿದೆ.

ಸಿದ್ದಾಪುರ ಮೂಲದ ಓಮಿನಿ ಚಾಲಕ ಇಬ್ರಾಹಿಂ ಮೃತಪಟ್ಟವ.  ಭಟ್ಕಳದಿಂದ ಸಿದ್ದಾಪುರದತ್ತ ಓಮಿನಿಯಲ್ಲಿ ಚಲಾಯಿಸಿಕೊಂಡು ಹೊಗುತ್ತಿರುವ  ವೇಳೆ, ಗೇರುಸೊಪ್ಪದಿಂದ ಹೊನ್ನಾವರ ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಹೆರಂಗಡಿ ಸಮೀಪ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಓಮಿನಿ ವಾಹನ ಸಂಪೂರ್ಣವಾಗಿ ಜಖಂಗೊಂಡಿದ್ದು, ಚಾಲಕ ತೀವ್ರವಾಗಿ ಗಾಯಗೊಂಡಿದ್ದ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆತ ಮೃತಪಟ್ಟಿದ್ದಾನೆ. 

ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೂ ಸಹ ಚಿಕ್ಕಪುಟ್ಟ ಗಾಯಗಳಾಗಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.