Yellapur| ಸಹಕಾರಿ ಸಂಘದಲ್ಲಿ ಮಾಜಿ ಕಾರ್ಯದರ್ಶಿ ಸುಮಾರು ಎಂಟು ಲಕ್ಷಕ್ಕೂ ಹೆಚ್ಚು ಹಣಕಾಸು ಅವ್ಯವಹಾರ ನಡೆಸಿದ್ದಾನೆ ಎಂಬ ದೂರು ಯಲ್ಲಾಪುರ ಠಾಣೆಯಲ್ಲಿ ದಾಖಲಾಗಿದೆ.
ಯಲ್ಲಾಪುರದ ಸಹ್ಯಾದ್ರಿ ಗಿರಿಜನ ದೊಡ್ಡ ಪ್ರಮಾಣದ ವಿವಿದೋದ್ದೇಶಗಳ ಸಹಕಾರಿ ಸಂಘ (ಲ್ಯಾಂಪ್ಸ)ದ ಸಹ ಕಾರ್ಯದರ್ಶಿ ಕಿರಣ ತಂದೆ ಗಣಪಾ ಸಿದ್ದಿ ಈ ಬಗ್ಗೆ ಠಾಣೆಗೆ ದೂರು ದಾಖಲಿಸಿ, 2012-2013 ರಿಂದ 2021-2022 ರವರೆಗೆ ಸಂಘದ ಕಾರ್ಯದರ್ಶಿಯಾಗಿ ರಾಮಚಂದ್ರ ಬಾರ್ಕೆಲ್ಯಾ ಸಿದ್ದಿ ಸೇವೆ ಸಲ್ಲಿಸಿರುತ್ತಾರೆ. ಆದರೆ 31.03.2016 ರಿಂದ 31.03.2019 ರ ಅವಧಿಯಲ್ಲಿ ಸಂಘದ 1,40,015 ರೂಪಾಯಿ ನಗದು ಹಣ ಹಾಗೂ 6,93,264 ರೂಪಾಯಿ ಮೌಲ್ಯದ ಕಿರು ಅರಣ್ಯ ಉತ್ಪನ್ನದ ಸ್ವತ್ತುಗಳು, ಹೀಗೆ ಒಟ್ಟೂ ರೂ. 8,33,279 ಹಣಕಾಸು ಅವ್ಯವಹಾರ ನಡೆಸಿ, ಸಂಘಕ್ಕೆ ಮೋಸ ಮಾಡಿದ್ದಾರೆ ಎಂದು
ದೂರು ಸಲ್ಲಿಸಿದ್ದಾರೆ.
ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
