ಕಾರವಾರ: ಕೆಲಸಕ್ಕೆ ಬಾರದವ್ರನ್ನ ತಗೊಂಡ್ರೆ ಹೀಗೆ ಆಗೋದು ಎಂದು ಕಾರವಾರ ಬಸ್ ಡಿಪೋ ಮ್ಯಾನೇಜರ್ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಹರಿಹಾಯ್ದ ಘಟನೆ ನಡೆಯಿತು.
ಕಾರವಾರದ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಾರಿಗೆ ವ್ಯವಸ್ಥೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಸಾರಿಗೆ ಬಸ್ ಗಳ ಕುರಿತು ಸಾಕಷ್ಟು ದೂರುಗಳು ಬರ್ತಾ ಇದೆ. ಈ ಬಗ್ಗೆ ಡಿಸಿ, ಸಿಇಒಗೆ ಗಮನ ಹರಿಸುವಂತೆ ಸೂಚಿಸಿದರು.
ಇನ್ನು ಸಭೆಗೆ ಡಿಪೋ ಮ್ಯಾನೇಜರ್ ಬಾರದಿರುವ ಬಗ್ಗೆ ಸಿಡಿಮಿಡಿಗೊಂಡ ಸಚಿವ ವೈದ್ಯ, ಕೂಡಲೇ ಕಾರವಾರ ಡಿಪೋ ಮ್ಯಾನೇಜರ್ ಅವರನ್ನು ಸಭೆಗೆ ಕರೆಯಿರಿ ಸಾರಿಗೆ ಅಧಿಕಾರಿಗೆ ಹೇಳಿ, ಕೆಲಸಕ್ಕೆ ಬಾರದವ್ರನ್ನ ಇಟ್ಟುಕೊಂಡರೆ ಹೀಗೆ ಆಗೋದು, ಅವ್ರನ್ನ ಬೇಗ ಮನೆಗೆ ಕಳಿಸ್ರಿ ಎಂದು ಉಸ್ತುವಾರಿ ಸಚಿವ ವೈದ್ಯ ಗುಡುಗಿದರು.
ಕಾರವಾರ- ಅಂಕೋಲಾ ಕ್ಷೇತ್ರಕ್ಕೆ ಹಳೆ ಬಸ್ ಎಂದು ಗೊಣಗಿದ ಸೈಲ್: ಕಾರವಾರ ಕ್ಷೇತ್ರಕ್ಕೆ ಗುಜರಿ ಬಸ್ ನೀಡಲಾಗುತ್ತಿದೆ. ತನ್ನದೇ ಪಕ್ಷದ ವಿರುದ್ದವೇ ಶಾಸಕ ಸೈಲ್ ಗೊಣಗಿ ಸೆಲ್ಫ್ ಗೋಲ್ ಹೊಡಿದ ಘಟನೆ ನಡೆಯಿತು.
ನಂತರ ಮಧ್ಯ ಪ್ರವೇಶಿಸಿದ ಸಚಿವ ವೈದ್ಯ,103 ಹೊಸ ಬಸ್, 500 ಚಾಲಕರನೇಮಕವಾಗಿದ್ದು, ಇದನ್ನು ಸಬೆಗೆ ಯಾಕೆ ಹೇಳುತ್ತಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿ, ಪ್ರಕರಣ ತಣ್ಣಗಾಗಿಸಿದರು.
