Bhatkal| ಪಟ್ಟಣದ ಹನೀಫ್ ಅಬಾದ್ ಪ್ರದೇಶದಲ್ಲಿರುವ ಅಲ್ ಜಜಿರಾ ಹೋಟೆಲ್ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣವು ಸುಮಾರು ಹತ್ತು ತಿಂಗಳ ನಂತರ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

 ಕುಂಜು ಅಂದುಕಾ ಸಾಹೇಬ ನೀಡಿದ ದೂರಿನ ಪ್ರಕಾರ, 2025ರ ಅಕ್ಟೋಬರ್ 26ರಂದು ರಾತ್ರಿ ಸುಮಾರು 11 ಗಂಟೆಗೆ ಹೋಟೆಲ್ ಎದುರು ನಿಲ್ಲಿಸಲಾಗಿದ್ದ ಸುಮಾರು ₹50 ಸಾವಿರ ಮೌಲ್ಯದ ಆಕ್ಟಿವಾ 3ಜಿ (KA-20 EM-5786) ದ್ವಿಚಕ್ರ ವಾಹನವನ್ನು ಕಳವು ಮಾಡಲಾಗಿದೆ. ಈ ಕೃತ್ಯವನ್ನು ಅಲ್ ಜಜಿರಾ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಅರ್ತಾಶ್ ಇಬ್ರಾಹಿಂ ಎಂಬಾತನೇ ಎಸಗಿದ್ದಾನೆ. ಕಳುವಾದ ವಾಹನವನ್ನು ಪತ್ತೆ ಮಾಡಿ ನೀಡುವಂತೆ ಕುಂಜು ಪೊಲೀಸರಿಗೆ ದೂರು ಸಲ್ಲಿಸಿದ್ದಾನೆ. ದ್ವೀಚಕ್ರ ವಾಹನ ಕಳುವು ನಡೆದು ಸುಮಾರು ಹತ್ತು ತಿಂಗಳ ನಂತರ ಈಗ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಿಸಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೂ ಕಾರಣವಾಗಿದೆ.

ಇನ್ನುಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ಸಂಖ್ಯೆ 159/2026ರಡಿ ಬಿಎನ್‌ಎಸ್ ಕಲಂ 303(2) ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.