Dandeli| ಶಿಕ್ಷಣ ಇಲಾಖೆ‌ ನೌಕರನ ಎರಡೂ ಬ್ಯಾಂಕ್ ಖಾತೆಯಿಂದ ಒಟ್ಟು ₹93 ಸಾವಿರ ಹಣ ಏಕಾಏಕಿ ನಾಪತ್ತೆಯಾದ ಘಟನೆ‌‌ ದಾಂಡೇಲಿಯಲ್ಲಿ ಬೆಳಕಿಗೆ ಬಂದಿದೆ.

ದಾಂಡೇಲಿಯ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಯ್ಯಾತ ಮಹಮ್ಮದ ತಂದೆ ರಾಜೇಸಾಬ ನದಾಫ (49) ಹಣ ಕಳೆದುಕೊಂಡ ದುರ್ದೈವಿ.

ಹಯ್ಯಾತ್ ದಾಂಡೇಲಿ ಪೋಲಿಸ್ ಠಾಣೆಗೆ ನೀಡಿದ‌ ದೂರಿನಂತೆ, ದಾಂಡೇಲಿಯ ಎಸ್‌ಬಿಐ ಬ್ಯಾಂಕ್‌ನಲ್ಲಿ ಖಾತೆ ಸಂಖ್ಯೆ 64032999188 ಹಾಗೂ ಸೌದತ್ತಿಯ ಕೆನರಾ ಬ್ಯಾಂಕ್‌ನಲ್ಲಿ ಖಾತೆ ಸಂಖ್ಯೆ 05152200052882 ಹೊಂದಿದ್ದರು. ದಿನಾಂಕ 22 ಫೆಬ್ರವರಿ 2026 ರಂದು ಮಧ್ಯಾಹ್ನ 2:37 ಗಂಟೆಗೆ ದಾಂಡೇಲಿಯ ಎಸ್‌ಬಿಐ ಬ್ಯಾಂಕ್ ಖಾತೆಯಿಂದ ₹45 ಸಾವಿರ ಹಣವನ್ನು ಅಪರಿಚಿತರು ವಂಚನೆಯ ಮೂಲಕ ತೆಗೆದುಕೊಂಡಿದ್ದಾರೆ.

ಇನ್ನೂ 23 ಫೆಬ್ರವರಿ 2026 ರಂದು ಬೆಳಿಗ್ಗೆ 11:04 ಗಂಟೆಗೆ ಸೌದತ್ತಿಯ ಕೆನರಾ ಬ್ಯಾಂಕ್ ಖಾತೆಯಿಂದ ₹48 ಸಾವಿರ ಹಣವನ್ನು ಸಹ ತೆಗೆದುಕೊಳ್ಳಲಾಗಿದೆ. ಹೀಗೆ ಒಟ್ಟು ₹93‌ಸಾವಿರ ಹಣವನ್ನು ಅವರಿಗೆ ತಿಳಿಯದಂತೆ ತೆಗೆಯಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶಿಕ್ಷಣ ಇಲಾಖೆ ನೌಕರನ ಖಾತೆಯಿಂದ ಏಕಾಏಕಿ ಹಣ ನಾಪತ್ತೆಯಾಗಿದ್ದು ಹೇಗೆ, ಹಣ ತೆಗೆದ ಆ ‘ದೂಸರಾ ಕೌನ್’ ಎಂದು ಪತ್ತೆ ಹಚ್ಚಲು ಮುಂದಾಗಿದ್ದಾರೆ.