Karwar| ಕಾರವಾರ ಹಾಗೂ ಶಿರಸಿಯ ಸರ್ಕಾರಿ ಬಾಲಕರ ಬಾಲಮಂದಿರದಲ್ಲಿರುವ ಮಕ್ಕಳಿಗೆ ಇಂಗ್ಲೀಷ್, ಗಣಿತ ಮತ್ತು ವಿಜ್ಞಾನ, ದೈಹಿಕ ಮತ್ತು ಯೋಗ, ಸಂಗೀತ ಮತ್ತು ಕ್ರಾಷ್ಟ್ (ತಲಾ 1ಹುದ್ದೆ) ಪಾಠ ಮಾಡುವ ಅರೆಕಾಲಿಕ ಶಿಕ್ಷಕರು, ಭೋಧಕರ ನೇಮಕಾತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಭೋಧಕರಿಗೆ ಪ್ರತಿ ಮಾಹೆಯಾನ ರೂ.10 ಸಾವಿರ ರೂಪಾಯಿ ಗಳಂತೆ ಗೌರವಧನ ನಿಗದಿಪಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶ್ರೀಮತಿ ಉಮಾ ನೇತಲಕರ ಕಟ್ಟಡ, ಹಬ್ಬುವಾಡಾ, ರಸ್ತೆ, ಕಾರವಾರ ದೂ.ಸಂ: 08382-220182 ನ್ನು ಸಂಪರ್ಕಿಸಿ, ಮೇ.28 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಸ್ಥಳೀಯರಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
