Karwar| ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಕಾರವಾರದ ಕುಟ್ಹಿನೋ ರಸ್ತೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಸುಲೋಚನಾ ನಾಗೇಶ ಶೆಟ್ಟಿ ಎಂಬುವವರ ಮನೆಯೇ ಕಳ್ಳತನಕ್ಕೆ ಯತ್ನಿಸಿದ್ದು. ಕಳ್ಳರು ಮನೆಯ ಹಿಂದಿನಿಂದ ಬಂದು ಮನೆ ಮೇಲ್ಛಾವಣಿಗೆ ಹತ್ತಿ, ಹಂಚು ತೆಗೆದು ಒಳನುಗ್ಗಿದ್ದಾರೆ. ಬಳಿಕ ಮನೆಯ ಒಳಗಿನ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿ, ಮನೆಯಲ್ಲಿದ್ದ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಬಂಗಾರ ಹಾಗೂ ಹಣ ಕಳ್ಳತನ ಮಾಡಲು ಪ್ರಯತ್ನಿಸಿದ್ದಾರೆ. ಘಟನೆ ಸಂಭವಿಸಿದ ವೇಳೆ ಅವರು ಮನೆಯಲ್ಲಿರಲಿಲ್ಲ.

ಈ ಸಂಬಂಧ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.