Siddapura : ಶೇರ್ ಮಾರ್ಕೇಟ್ ನಲ್ಲಿ ಹಣ ಕಳೆದುಕೊಂಡ ಯುವಕ ನೇಣಿಗೆ ಶರಣಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದಲ್ಲಿ ನಡೆದಿದೆ.

ಸಿದ್ದಾಪುರದ 22 ವರ್ಷದ ಹರ್ಷವರ್ಧನ್ ಎಂಬ ಯುವಕ ನೇಣಿಗೆ ಶರಣಾಗಿದ್ದು, ಈತ ಮನೆಯಲ್ಲೇ ಪ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹರ್ಷವರ್ಧನ್ ಮೊಬೈಲ್ ಮೂಲಕ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಟ್ರೇಡಿಂಗ್ ಮಾಡುತ್ತಿದ್ದ. ಯುವಕ ಇತ್ತೀಚಿಗೆ   ಶೇರ್ ಮಾರ್ಕೆಟ್‌ನಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದನೆಂದು ತಿಳಿದುಬಂದಿದೆ.

ತನಗಾದ ಆರ್ಥಿಕ ನಷ್ಟವನ್ನು ಮನಸ್ಸಿಗೆ ಹಚ್ಚುಕೊಂಡ ಹರ್ಷವರ್ಧನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಹರ್ಷವರ್ಧನ್ ಅವರ ತಂದೆ ಚಂದ್ರಶೇಖರ್ ಅವರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.