ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕುಮಟಾದ ದಿಶಾಂತ್ ನಾಯ್ಕ 625 ಕ್ಕೆ 624 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ರ‌್ಯಾಂಕ್ ಗಳಿಸಿದ್ದಾನೆ.
ಕುಮಟಾದ ಡಾ. ಎವಿ ಬಾಳಿಗ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿಯಾಗಿದಾ ದಿಶಾಂತ್ ಸಾಧನೆಗೆ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ. ತಾಲೂಕಿನ ಜೇಷ್ಠಪುರ ಗ್ರಾಮದ ದಯಾನಂದ ಹಾಗೂ ಪ್ರಿಯಾ ದಂಪತಿಗಳ ಮಗನಾಗಿದ್ದು ಇವರ ತಂದೆ ದಯಾನಂದ ನಾಯ್ಕ ಕುಮಟಾ ಪೊಲೀಸ್ ಠಾಣೆಯಲ್ಲಿ ಹವಾಲ್ದಾರ್ ಆಗಿ ಕಾರ್ಯನಿರ್ವಹಿಸುತಿದ್ದಾರೆ.
ಶಾಲೆಯ ಶಿಕ್ಷಕರು ಹಾಗೂ ಪೋಷಕರ ಸಹಕಾರದಿಂದ ನಾನು ಈ ಸಾಧನೆ ಮಾಡಿದ್ದು ಅವರೆಲ್ಲರಿಗೂ ಈ ಮೂಲಕ ಅಭಿನಂದಿಸುತ್ತೇನೆ ಎಂದು ವಿದ್ಯಾರ್ಥಿ ದಿಶಾಂತ್ ಹೇಳಿದರು.
