ಸಂತ ನಿರಂಕಾರಿ ಚಾರಿಟೇಬಲ್ ಟ್ರಸ್ಟ್ ದೆಹಲಿ, ಶಾಖೆ ಕಾರವಾರ ಇವರ ವತಿಯಿಂದ ಕಾರವಾರದ ಹೋಟೆಲ್ ಅಜ್ವಿ, ಮಾರುತಿ ಮೂರ್ತಿಯ ಮುಂದೆ ಸಮುದ್ರ ತೀರದಲ್ಲಿ ನಾಳೆ ಭಾನುವಾರ ದಿನಾಂಕ 22 ಫೆಬ್ರುವರಿ 2026 ರಂದು ಬೆಳಿಗ್ಗೆ 8 ರಿಂದ 11 ಗಂಟೆಯವರೆಗೆ ಭವ್ಯ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಈ ಅಭಿಯಾನವನ್ನು ಸಂತ ನಿರಂಕಾರಿ ಚಾರಿಟೇಬಲ್ ಟ್ರಸ್ಟ್ ದೆಹಲಿ, ಶಾಖೆ ಕಾರವಾರ ಇವರ ವತಿಯಿಂದ ಆಯೋಜಿಸಲಾಗಿದ್ದು, ಸದ್ಗುರು ಬಾಬಾ ಹರದೇವ್ ಸಿಂಗಜೀ ಮಹಾರಾಜ ಅವರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ದೇಶಾದ್ಯಂತ 1500 ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತದೆ.

ಸಂತ ನಿರಂಕಾರಿ ಮಂಡಳವು ಆಧ್ಯಾತ್ಮಿಕ ಜಾಗೃತಿಯ ಮೂಲಕ ವಿಶ್ವಬಂಧುತ್ವವನ್ನು ಸ್ಥಾಪಿಸುವ ಮಹತ್ವದ ಕಾರ್ಯ ಮಾಡುತ್ತಿರುವುದರ ಜೊತೆಗೆ, ಸಾಮಾಜಿಕ ಬದ್ಧತೆಯ ಭಾಗವಾಗಿ ರಕ್ತದಾನ ಶಿಬಿರಗಳು, ವೃಕ್ಷಾರೋಪಣ, ವ್ಯಸನಮುಕ್ತ ಅಭಿಯಾನ, ಯುವ ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮಗಳು ಮತ್ತು ಸ್ವಚ್ಛತಾ ಅಭಿಯಾನಗಳಲ್ಲಿ ಮುಂಚೂಣಿಯಲ್ಲಿದೆ.

ಈ ಸಾಮಾಜಿಕ ಕಾರ್ಯದ ಭಾಗವಾಗಿ ಸಮುದ್ರ ತೀರದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ ಸಂತ ನಿರಂಕಾರಿ ಮಂಡಳದ ಸಹೋದರ – ಸಹೋದರಿಯರು ಹಾಗೂ ನೂರಾರು ಭಕ್ತರು ಸ್ವಯಂಪ್ರೇರಿತವಾಗಿ ಭಾಗವಹಿಸಲಿದ್ದಾರೆ.

ಸ್ವಚ್ಛತಾ ಕಾರ್ಯಕ್ರಮದ ನಂತರ ಅದೇ ಸ್ಥಳದಲ್ಲಿ ಆಧ್ಯಾತ್ಮಿಕ ಸತ್ಸಂಗವೂ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂತ ನಿರಂಕಾರಿ ಮಂಡಳ ಕಾರವಾರ ಶಾಖೆಯ ವತಿಯಿಂದ ಮನವಿ ಮಾಡಲಾಗಿದೆ.