ಉತ್ತರಕನ್ನಡ ಜಿಲ್ಲೆಯ ಕರಾವಳಿ ತಾಲೂಕಿನಲ್ಲಿ ಅಲ್ಲಲ್ಲಿ ಮಳೆಯಾಗಿದೆ. ತಾಪಮಾನ ಏರಿಕೆಯಿಂದ ಬೇಸತ್ತಿದ್ದ ಜನರಿಗೆ ಮಳೆರಾಯನ‌ ಆಗಮನೆ ಕೊಂಚ ಸಮಾಧಾನ ತಂದಿದೆ.

ಜಿಲ್ಲೆಯ ಭಟ್ಕಳ ಹಾಗೂ ಹೊನ್ನಾವರದಲ್ಲಿ ಸುಮಾರು ಅರ್ಧಗಂಟೆಗೂ ಅಧಿಕ ಮಳೆಯಾಗಿದೆ ಎಂದು ತಿಳಿದು ಬಂದಿದೆ. ಮುಂದಿನ ಮೂರಗಂಟೆಯಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುಸ್ಸೂಚನೆ ನೀಡಿದ್ದ ಬೆನ್ನಲ್ಲೇ ಭಟ್ಕಳದಲ್ಲಿ ಮಳೆ ಪ್ರಾರಂಭವಾಗಿದೆ.

ಬೇಸಿಗೆ ಬಿಸಿಗೆ ಕಾದು ಕೆಂಡದಂತಾಗಿದ್ದ ಇಳೆಗೆ ಮಳೆರಾಯನ ಆಗಮನ ಕೊಂಚ ತಂಪೆರೆದಂತಾಗಿದೆ.