Karwar| ಪ್ರತಿಷ್ಠಿತ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ (National Defence Academy) 153ನೇ ಕೋರ್ಸ್‌ನ ಆರು ಮಹಿಳಾ ಕೆಡೆಟ್ ಗಳು ಸೇರಿದಂತೆ ಒಟ್ಟು 36 ನೌಕಾ ಕಡೆಟ್‌ಗಳು ಸೇವಾ ಸಂಯೋಜನೆ (Service Attachment) ಭಾಗವಾಗಿ ಕಾರವಾರದ ನೆವಲ್ ಶಿಪ್ ರಿಪೇರ್ ಯಾರ್ಡ್ (NSRY) ಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ NSRY ಆಡ್ಮಿರಲ್ ಸೂಪರಿಂಟೆಂಡೆಂಟ್ ರವನೀಶ್ ಸೇಠ್, ಅವರೊಂದಿಗೆ ಸಂವಾದ ನಡೆಸಿ, ನೌಕಾಪಡೆಯ ಸೇವಾ ಮೌಲ್ಯಗಳು, ನೌಕಾಪಡೆಯ ಕಾರ್ಯನಿರ್ವಹಣೆಯ ಶೈಲಿ ಹಾಗೂ NSRY ಯ ಇತಿಹಾಸ, ಸಂಸ್ಕೃತಿ ಮತ್ತು ‘21ನೇ ಶತಮಾನದ ಯಾರ್ಡ್’ ಆಗಿ ರೂಪಾಂತರಗೊಂಡಿರುವ ಬಗ್ಗೆ ವಿವರಿಸಿದರು.
ನಂತರ NSRY ಯ ಡ್ಯೂಟಿ ಕಮಾಂಡರ್ ನೌಕೆಗಳ ದುರಸ್ತಿ, ಮರುಸಂರಚನೆ (refitting), ತಾಂತ್ರಿಕ ಬೆಂಬಲ ಸಾಮರ್ಥ್ಯಗಳು ಮತ್ತು ನೌಕಾಪಡೆಯ ಪ್ರಮುಖ ಕಾರ್ಯಾಚರಣೆಗಳಲ್ಲಿ ಯಾರ್ಡ್‌ನ ಪಾತ್ರವನ್ನು ವಿವರಿಸಿದರು.
ಬಳಿಕ ಕ್ಯಾಡೆಟ್‌ಗಳಿಗೆ ಯಾರ್ಡ್‌ನ ಸವಿಸ್ತಾರ ಪರಿಚಯ ಏರ್ಪಡಿಸಿ, ಶಿಪ್‌ಲಿಫ್ಟ್ ಕಾರ್ಯಾಚರಣೆಗಳಲ್ಲಿ ಬಳಸುವ ಸೂಕ್ಷ್ಮ ಇಂಜಿನಿಯರಿಂಗ್ ಹಾಗೂ ಆಧುನಿಕ ತಾಂತ್ರಿಕ ಮೂಲಸೌಕರ್ಯವನ್ನು ನೇರವಾಗಿ ವೀಕ್ಷಿಸುವ ಅವಕಾಶ ದೊರಕಿತು.

ಈ ಭೇಟಿಯು ಕಡೆಟ್‌ಗಳು ನೌಕಾಪಡೆಯ ಕಾರ್ಯವಿಧಾನಗಳ ಕುರಿತು ಪ್ರಾಯೋಗಿಕ ಅರಿವು ಪಡೆಯಲು ಸಹಾಯಕಕಾರಿಯಾಗಲಿದೆ.
