ಶೆಟ್ರೆ ನೀವು ಅಲ್ಲೇ ಇರಿ, ಇಲ್ಲಿ ಬರಲು‌ ಹೋಗಬೇಡಿ, ನಾವು ಯಾರನ್ನೂ ಕರೆಯಲ್ಲ ಮತ್ತು ಸೇರಿಸಿಕೊಳ್ಳುವೂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕುಮಟಾ ಶಾಸಕ ದಿನಕರ ಶೆಟ್ಟಿಯವರಿಗೆ ಟಾಂಗ್ ನೀಡಿದ ಘಟನೆ ನಡೆಯಿತು.

ಗಂಗಾವಳಿ ನದಿಗೆ ನಿರ್ಮಿಸಲಾದ ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ದಿನಕರ ಶೆಟ್ಟಿ ಯವರನ್ನು ಕಿಚಾಯಿಸಿದ ಸಿಎಂ, ಶೆಟ್ರೆ ನೀವು ಎಲ್ಲಿದ್ದಿರೋ ಅಲ್ಲೇ ಇರಿ, ನಾವೂ ನಿಮ್ಮನ್ನ ಕಾಂಗ್ರೆಸ್‌ಗೆ ಕರೆಯುವುದೂ ಇಲ್ಲಾ ಸೇರಿಸಿಕೊಳ್ಳುವುದೂ ಇಲ್ಲ‌ ಎಂದು ಕಾಲೆಳೆದರು.

ಇನ್ನು ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೆ ಸರ್ಕಾರ ಕೇಂದ್ರಕ್ಕೆ‌ ಶಿಫಾರಸು ಮಾಡಿದೆ. ಆದರೆ ಕೇಂದ್ರ ತಿರಸ್ಕರಿಸಿದೆ. ಹೀಗಾಗಿ ದಿನಕರ ಶೆಟ್ಟಿಯರನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ ಎಂದು ಮತ್ತೊಂದು ಟಾಂಗ್ ನೀಡಿದರು.

ಗೋಕರ್ಣ ಪಟ್ಟಣ ಪಂಚಾಯತ್ ಆಗಿ ಘೋಷಣೆ ಕುರಿತಂತೆ, ಮತ್ತೊಮ್ಮೆ ದಿನಕರ ಶೆಟ್ಟಿಯವರನ್ನು ಕಿಚಾಯಿಸಿದ‌ ಸಿಎಂ‌, ಈಗ ಪಂಚಾಯಿತಿ ಚುನಾವಣೆ ಸದ್ಯದಲ್ಲೇ ನಡೆಯಲಿದೆ. ಹೀಗಾಗಿ ಸಧ್ಯ ಘೋಷಣೆ ಸಾಧ್ಯವಿಲ್ಲ. ಆದರೆ ಮುಂದಿನ ಬಾರಿ ಘೋಷಣೆ ಮಾಡಲಾಗುವುದು ಎಂದ ಅವರು, ದಿನಕರ ಶೆಟ್ರು ಮತ್ತು ಅವರ ಪಕ್ಷ ಪಂಚಾಯತ್ ಚುನಾವಣೆ ಕೂಡಲೇ ಮಾಡಿ ಎಂದು ಅಧಿವೇಶನದಲ್ಲಿ ಬೊಬ್ಬೆ‌ ಹಾಕುತ್ತಾರೆ. ಇಲ್ಲಿ ದಿನಕರ ಶೆಟ್ರು ಡಿಸೆಂಬರ ಗೆ ಚುನಾವಣೆ ಮಾಡಿದರೂ ಅಡ್ಡಿಯಿಲ್ಲ. ಗೋಕರ್ಣ ಪಟ್ಟಣ ಪಂಚಾಯತ್ ಆಗಿ ಘೋಷಣೆ ಮಾಡಿ ಎಂದು ಒತ್ತಾಯಿಸ್ತಾರೆ ಎಂದು ಶೆಟ್ರ ದ್ವಂಧ ನಿಲುವಿನ ಬಗ್ಗೆ ಮೂರನೇಯ ಬಾರಿ ಸಿಎಂ ಕಾಲೆಳೆದರು.