Karwar| ನಗರದ ಹಬ್ಬುವಾಡ ಮಹಾಗಣಪತಿ ದೇವಸ್ಥಾನದಲ್ಲಿ ಮಂಗಳವಾರ ಮಾವಿನ ಹಣ್ಣಿನ ಉತ್ಸವ ಶ್ರದ್ಧೆ, ಭಕ್ತಿಯಿಂದ ನೆರವೇರಿತು.
ಭಕ್ತಾದಿಗಳು ಒಂದು ಕ್ವಿಂಟಾಲ್ಗೂ ಅಧಿಕ ಮಾವಿನ ಹಣ್ಣನ್ನು ತಂದು ದೇವರಿಗೆ ಅರ್ಪಿಸಿದ್ದರು. ಮಹಾಗಣಪತಿಗೆ ಮಾವಿನ ಹಣ್ಣಿನ ರಸದ ಅಭಿಷೇಕ ಮಾಡಲಾಯಿತು. ಪ್ರಸಾದವಾಗಿ ಮಾವಿನ ಹಣ್ಣು, ಮಾವಿನ ಹಣ್ಣಿನ ರಸಾಯನ ಹಾಗೂ ಮಾವಿನ ಕಾಯಿ ಚಿತ್ರಾನ್ನ ನೀಡಲಾಗಿತ್ತು. ದೇವರಿಗೆ ಹೂವಿಗಿಂತ ಹೆಚ್ಚಾಗಿ ಮಾವಿನ ಎಲೆ ಹಾಗೂ ಹಣ್ಣಿನಿಂದಲೇ ಅಲಂಕಾರ ಮನಮೋಹಕವಾಗಿತ್ತು. ರಾತ್ರಿ ಮಾವಿನ ಹಣ್ಣುಗಳನ್ನು ಹರಾಜು ಹಾಕಲಾಯಿತು.
ಬಾಡ ಗ್ರಾಮದ ಮಹಾದೇವ ವಿನಾಯಕ ಟ್ರಸ್ಟ್ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು, ಅರ್ಚಕರು ಹಾಗೂ ಎಲ್ಲ ಭಕ್ತಾದಿಗಳ ಸಹಕಾರದಿಂದ ಉತ್ಸವ ಯಶಸ್ವಿಯಾಯಿತು.
