Udupi|ನಿಂತಿದ್ದ ಕಂಟೈನರ್ ಲಾರಿಗೆ ಎರ್ಟಿಗಾ ಕಾರು ಢಿಕ್ಕಿ ಹೊಡೆದ ಪರಿಣಾಮ ತಾಯಿ ಮಗಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದದ ರಾಷ್ಡ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಬೆಂಗಳೂರು ಮೂಲದ ಮಮತಾ(36) ಹಾಗೂ ಮಗಳು ಧೃತಿಕಾ (14) ಮೃತ ದುರ್ದೈವಿಗಳು. ಘಟನೆಯಲ್ಲಿ
ಮೃತ ಮಮತಾ ಪತಿ ರಾಘು(40), ಜಾಹ್ನವಿ(12), ಚಾರ್ವಿ(10) ಹಾಗೂ ಕಿರಣ್ ಗೆ ಗಂಭೀರ ಗಾಯಗಳಾಗಿವೆ.
ಗಾಯಾಳುಗಳಾದ ರಾಘು, ಜಾಹ್ನವಿ ಹಾಗೂ ಚಾರ್ವಿಗೆ ಕುಂದಾಪುರದ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೆ,
ಮತ್ತೋರ್ವ ಗಾಯಾಳು ಕಿರಣ್ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಡುಪಿಗೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಮೂಲದ ಕುಟುಂಬ ಉಡುಪಿ ಜಿಲ್ಲೆಯ ಹಲವು ಪ್ರವಾಸಿ ತಾಣಗಳ ಭೇಟಿ ಮುಗಿಸಿ ಗೋಕರ್ಣಕ್ಕೆ ಮುರುಡೇಶ್ವರಕ್ಕೆ ತೆರಳುತ್ತಿತ್ತು. ಈ ವೇಳೆ ದುರಂತ ಸಂಭವಿದ್ದು, ಇಬ್ಬರು ದಾರುಣ ಅಂತ್ಯ ಕಂಡಿದ್ದಾರೆ.
