ಫೆಬ್ರವರಿ 15 ರಂದು ಕಾರವಾರ ತಾಲೂಕಿನ ಬಾಡ ಗ್ರಾಮದ  ಮಹಾದೇವಸ್ಥಾನದಲ್ಲಿ ಶಿವರಾತ್ರಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಮಹಾದೇವ ವಿನಾಯಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಶಿವರಾತ್ರಿಯ ದಿನದಂದು ಬೆಳಗಿನ ಜಾವ 2 ಗಂಟೆಗೆ ದೇವಸ್ಥಾನದ ವತಿಯಿಂದ ಅಭಿಷೇಕ ಹಮ್ಮಿಕೊಳ್ಳಲಾಗಿದೆ. ತದನಂತರ ಪ್ರಾತ; ಕಾಲ 2.30 ರಿಂದ ಪ್ರಾರಂಭವಾಗಿ ಪ್ರತಿ ಒಂದು ತಾಸಿನ ಅವಧಿಯ ಬ್ಯಾಚನಂತೆ ಹಾಗೂ ರೂ. 70/- ಪ್ರತಿ ಕೂಪನದಂತೆ ಸಾರ್ವಜನಿಕರಿಗೆ ಅಭಿಷೇಕಕ್ಕೆ ಅನುವು ಮಾಡಿಕೊಡಲಾಗುವುದು.

ಎಲ್ಲಾ ಸಾರ್ವಜನಿಕರು ಅಭಿಷೇಕ ಮಾಡುವವರು ಇದೇ ಫೆಬ್ರವರಿ  5 ರಿಂದ ದೇವಸ್ಥಾನದ ಕಚೇರಿಯಲ್ಲಿ ಅಭಿಷೇಕದ ಕೂಪನ್ ಗಳನ್ನು ನೀಡಲಾಗುವುದು ಹಾಗೂ ಇದರ ವಿವರಗಳನ್ನು ದೇವಸ್ಥಾನದ ಕಚೇರಿಯಲ್ಲಿ ಮಾಹಿತಿ ಪಡೆದುಕೊಳ್ಳಬಹುದು.

ಇದು ಸದ್ಭಕ್ತರ ಹಾಗೂ ವಯಸ್ಕರ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಲಾಗಿದ್ದು, ಇದರ ಸದುಪಯೋಗಯನ್ನು ಗ್ರಾಮದ ಜನರು ಪಡೆದುಕೊಳ್ಳಬೇಕೆಂದು ಮಹಾದೇವ ವಿನಾಯಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.