ಕಾರವಾರ – ಸದಾಶಿವಗಡ ಲಯನ್ಸ್ ಕ್ಲಬ್ಬಿನ ಡಿಸ್ಟ್ರಿಕ್ಟ್ ಗೌರ್ನರ್ ವಾರ್ಷಿಕ ಭೇಟಿ ಕಾರ್ಯಕ್ರಮವನ್ನು ಅಸ್ನೋಟಿ ಶಿವಾಜಿ ವಿದ್ಯಾ ಮಂದಿರದಲ್ಲಿ ಆಯೋಜಿಸಲಾಗಿತ್ತು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಲಯನ್ಸ್ ಡಿಸ್ಟ್ರಿಕ್ಟ್ 317- ಬಿ ಗವರ್ನರ್ ಪಿ.ಎಮ್.ಜೆ.ಎಫ್ ಲಯನ್ ಜೈಮೊಲ್ ನಾಯ್ಕ, ಸದಾಶಿವಗಡ ಲಯನ್ಸ್ ಅತ್ಯುತ್ತಮ ಸಾಮಾಜಿಕ ಸೇವೆ ಮಾಡುತ್ತಾ ಬಂದಿದೆ. ಇದರ ಸೇವೆ ಹೀಗೆಯೇ ಮುಂದುವರಿದು, ಈ ಭಾಗದ ಅವಶ್ಯಕತೆಗಳನ್ನು ಪೂರೈಸಲೆಂದು ಆಶಿಸ ಪರ್ಮಿನೆಂಟ್ ಪ್ರೊಜೆಕ್ಟ್ ಹೆಸರಿನಲ್ಲಿ ಶಿವಾಜಿ ಬಾಲಕರ ವಸತಿನಿಲಯದ ವಿದ್ಯಾರ್ಥಿಗಳಿಗೆ ಆಹಾರ ಧಾನ್ಯಗಳನ್ನು ಮತ್ತು ಪ್ರೇಮ ಆಶ್ರಮ ಟ್ರಸ್ಟ್ ಬಾಲಕಿಯರ ವಸತಿನಿಲಯದ ವಿದ್ಯಾರ್ಥಿನಿಯರ ಅನುಕೂಲಕ್ಕೆ ಬರ್ನಿಂಗ್ ಕಂಟ್ರೋಲ್‌ ಮಿಶನ್ ನೀಡುವದಾಗಿ ಘೋಷಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಕ್ಯಾಬಿನೆಟ್ ಸೆಕ್ರೆಟರಿ ಪಿ ಎಮ್ ಜೆ ಎಫ್ ಲಯನ್ ಡಾ.ಕೀರ್ತಿ ನಾಯ್ಕರ, ಕಾರವಾರ ನನ್ನ ಜನ್ಮಭೂಮಿ ಆದ್ದರಿಂದ ಇಲ್ಲಿಗೆ ಬರುವದು ಬಹಳ ಖುಷಿ ನೀಡುತ್ತದೆ ಎನ್ನುತ್ತಾ, ಮನುಷ್ಯರಾಗಿ ಹುಟ್ಟಿದ ಮೇಲೆ ಏನಾದರೂ ಒಂದು ಉತ್ತಮ ಸೇವೆ ಮಾಡಬೇಕು ಅದನ್ನು ಲಯನ್ಸ್ ಒದಗಿಸಿದೆ ಎಂದರು.

ಕ್ಯಾಬಿನೆಟ್ ಟ್ರಸ್ಯೂರರ್ ಎಮ್ ಜೆ ಎಫ್ ಲಯನ್ ರಾಹುಲ್ ವೇರೇಕರ್ ಮಾತನಾಡುತ್ತಾ ಈ ವರ್ಷದ ಗೌರ್ನರ್ ವಾರ್ಷಿಕ ಭೇಟಿಗಳಲ್ಲಿ ಸದಾಶಿವಗಡ ಲಯನ್ಸ್ ಕ್ಲಬ್ ಭೇಟಿ ವಿಶೇಷವಾಗಿದೆ ಎಂದು ಸಂತೋಷವನ್ನು ವ್ಯಕ್ತಪಡಿಸಿದರು.

ರಿಝನಲ್ ಛೇರಪರ್ಸನ್ ಪಿ ಎಮ್ ಜೆ ಎಫ್ ಲಯನ್ ರಾಜೇಶ ಸಾಲೇಹಿತ್ತಲ ಮಾತನಾಡುತ್ತಾ ಲಯನ್ಸ್ ಸೇವೆ ಸಮಾಜದ ಆಶಾಕಿರಣವಾಗಿ ಒಡಮೂಡಬೇಕು ಆ‌ನಿಟ್ಟಿನಲ್ಲಿ ಸದಾಶಿವಗಡ ಲಯನ್ಸ್ ಕ್ಲಬ್ ಪ್ರಶಂಸನಾರ್ಹವಾದ ಕಾರ್ಯ ಮಾಡುತ್ತಿದೆ ಅದರಲ್ಲೂ ಅಧ್ಯಕ್ಷರಾದ ಲ.ಡಾ.ಮುಖಾದಮ ಅವರು ಸದಾ ಉತ್ತಮ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿರುವ ವ್ಯಕ್ತಿ ಎಂದು ಪ್ರಸಂಶೆ ವ್ಯಕ್ತಪಡಿಸಿ ಶೈಕ್ಷಣಿಕ ಅನುಕೂಲಕ್ಕೆ ಆರ್ಥಿಕ ಸಹಾಯ ಮಾಡಿದರು.

ಇನ್ನೋರ್ವ ಅತಿಥಿ ಝೋನ್ ಛೇರ್ಮನ್ ಎಮ್ ಜೆ ಎಫ್ ಲಯನ್ ಅನೀಲ ಶೇಠ ನಮ್ಮ ವಿಭಾಗದಲ್ಲಿ ಎಲ್ಲಾ ಕ್ಲಬ್ ಸಂತಸದಾಯಕ ಸೇವೆ ಒದಗಿಸುತ್ತಿವೆ ಸದಾಶಿವಗಡ ಲಯನ್ಸ್ ಕ್ಲಬ್ ಆದರ್ಶಣಿಯವಾದ ಸೇವೆ ನೀಡುತ್ತಿರುವದು ನನಗೆ ವ್ಯಯಕ್ತಿಕವಾಗಿ ತುಂಬಾ ಸಂತಸ ನೀಡಿದೆ ಎನ್ನುವದರ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಆರ್ಥಿಕ ಸಹಾಯ ಒದಗಿಸಿದರು.

ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ.ಡಾ.ನಯೀಮ್ ಮುಖಾದಮ್ ಗವರ್ನರವರು ನಮ್ಮ ಕ್ಲಬ್ಬಿಗೆ ಭೇಟಿ ಕೊಟ್ಡಿರುವದು ನಮ್ಮ ಮನದ ಸಂಭ್ರಮವನ್ನು ಹೆಚ್ಚಿಸಿದೆ ಜೊತೆಗೆ ನಮ್ಮ ಕ್ಲಬ್ ಇಂದು ಉತ್ತಮ ಕೆಲಸಮಾಡುತ್ತಿದೆ ಎಂದರೆ ಅದಕ್ಕೆ ಕಾರಣ ನಮ್ಮ ಕ್ಲಬ್ ಸದಸ್ಯರ ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿಕೊಂಡರು.ವೇದಿಕೆಯ ಮೇಲೆ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾದ ಲ.ರಾಮಚಂದ್ರ ಅಂದ್ಲಮನೆ, ಲ.ಸುನೀಲ್ ಐಗಳ್ ಹಾಗೂ ಲ.ಜಯಶೀಲಾ ಬಿಷ್ಟಣ್ಣನವರ ಉಪಸ್ಥಿತಿರಿದ್ದರು.

ಇದೇ ಸಂದರ್ಭದಲ್ಲಿ ಡಿಸ್ಟ್ರಿಕ್ಟ ಗೌರ್ನರ್ ಲಯನ್ಸ್ ಕ್ಲಬ್ ಸದಸ್ಯರಿಗೆ ಗೌರವ ಸಮರ್ಪಿಸಿದರು. ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಜೆ.ಬಿ.ತಿಪ್ಪೇಸ್ವಾಮಿ ಕ್ಲಬ್ ವರದಿ ವಾಚಿಸಿದರು.ಎಮ್ ಜೆ ಎಫ್ ಲ.ಡಾ.ಸಂದೀಪ್ ಅಣ್ವೇಕರ ನಿರೂಪಿಸಿದರು.ಲ.ಇಂಜಿನಿಯರ್ ರೋಶನ್ ರೇವಣಕರ ಗೌರ್ನರ್ ಅವರನ್ನು ಪರಿಚಯಿಸಿದರು.

ಲ.ಸೋನಿಯಾ ಅಣ್ವೇಕರ ಧ್ವಜವಂದನೆ ಮಾಡಿದರು.ಖಜಾಂಚಿ ಲ.ಡಾ.ಗಣೇಶ ಬಿಷ್ಟಣ್ಣನವರ ವಂದಿಸಿದರು.