ಕಾರವಾರ: ಹಳದಿಪುರದ ವಾಮಾನಾಶ್ರಮ ಮಠದ ಸ್ವಾಮೀಜಿ ಹಣದ ಅಪರಾತಪರಾ ನಡೆಸಿದ್ದು, ಈ ಬಗ್ಗೆ ಪ್ರಶ್ನಿಸಿದ ತನ್ನ ಮೇಲೆ ಮಠದಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ಅಜೀತ್ ಪೋಕಳೆ ಆರೋಪಿಸಿದ್ದಾರೆ
ಕಾರವಾರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಕಳೆ, ಕಳೆದ ರವಿವಾರ ಜುಲೈ 5 ರ ಬೆಳಿಗ್ಗೆ 11 ಘಂಟೆಗೆ ಹೊನ್ನಾವರ ತಾಲ್ಲೂಕಿನ ಹಳದಿಪುರ ಗ್ರಾಮದಲ್ಲಿ ಸಮಾಜದ ಮಠದಲ್ಲಿ ನಡೆದ ಸಭೆಯಲ್ಲಿ ತಾನೂ ಭಾಗವಹಿಸಿದ್ದೆ, ಸಭೆಯಲ್ಲಿ ವೈಶ್ಯ ಸಮಾಜದ ಕೃಷ್ಣಾಶ್ರಮ ಮಠದ ವಾಮನಾಶ್ರಮ ಸ್ವಾಮಿ ಎನ್ನುವ ವ್ಯಕ್ತಿ ಮಠದ ಆಸ್ತಿ ಹಣದ ವಿಷಯದಲ್ಲಿ ಹಣದ ವಂಚನೆ ಮೊಸ ಮಾಡಿ ಸಮಾಜದ ಮಹಿಳೆಯರ ಮೇಲೆ ಕಿರುಕುಳ ಮಾಡಿರುವ ಬಗ್ಗೆ, ಸ್ವಾಮೀಜಿ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಸಭೆಯನ್ನು ಕರೆಯಲಾಗಿತ್ತು.
ಸಭೆಯು ಪ್ರಾರಂಭವಾಗುತ್ತಿದ್ದಂತೆ ತಾನು ಸಭೆಯನ್ನು ಉದ್ದೇಶಿಸಿ, ಸ್ವಾಮೀಜಿ ಮಾಡಿದ ಅಪರ ತಪರಾ ವ್ಯವಹಾರ ವಂಚನೆ ಮೊಸ ಮತ್ತು ಮಹಿಳೆಯ ಮೇಲೆ ಕಿರುಕುಳ ಮಾಡಿ ಇಷ್ಟು ದಿನಗಳಾದರೂ ಅವರ ವಿರುದ್ಧ ಪೋಲಿಸ ಠಾಣೆಯಲ್ಲಿ ಯಾಕೆ ದೂರು ದಾಖಲಿಸಿಲ್ಲ ಎಂದು ಪ್ರಶ್ನಿಸಿದ್ದೆ. ಆಗ ಕೆಲವು ಸುಮಾರು 8 ರಿಂದ 10 ಅಪರಿಚಿತ ವ್ಯಕ್ತಿಗಳು ನನ್ನ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿ ಕುತ್ತಿಗೆಯನ್ನು ಹಿಚುಕಿ ನನ್ನ ಗಡ್ಡ ಮತ್ತು ತಲೆ ಕೂದಲನ್ನು ಎಳೆದು ನೆಲಕ್ಕೆ ಕೆಡವು ಕಾಲಿನಿಂದ ಒದ್ದು, ಸ್ವಾಮಿಯವರ ವಿರುದ್ಧ ಮಾತನಾಡಿದರೆ ನಿನ್ನನ್ನು ಜೀವ ಸಮೇತ ಮುಗಿಸಿ ಬಿಡುತ್ತೇನೆಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.
ಮುಂದಿನ ದಿನಗಳಲ್ಲಿ ಸ್ವಾಮೀಜಿಯ ಅವ್ಯವಹಾರ ಒಂದೊಂದಾಗಿ ದಾಖಲೆ ಸಮೇತ ಜನರ ಮುಂದಿಡಲಿದ್ದೇನೆ ಎಂದರು. ಇನ್ನು ಮಠದ ಅವ್ಯವಹಾರ ಪ್ರಶ್ನಿಸಿದ್ದಕ್ಕೆ ತನ್ನ ಮೇಲೆ ಹಲ್ಲೆಯಾಗುವ ಸಾದ್ಯತೆ ಇದೆ. ತನ್ನ ಜೀವಕ್ಕೆ ಏನಾದರೂ ತೊಂದರೆ ಆದರೆ ಮಠದ ಸ್ವಾಮೀಜಿಯವರೆ ಕಾರಣ ಎಂದು ಆರೋಪಿಸಿದರು.
ಮಠದಲ್ಲಿ ತನ್ನ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಈಗಾಗಲೇ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರು ದಾಖಲಿಸಿದ್ದೇನೆ, ತನ್ನ ಮೇಲಿನ ಹಲ್ಲೆಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಕಳೆ ಆಗ್ರಹಿಸಿದರು.
