ಜಿಲ್ಲೆಯಲ್ಲಿ ಭಾರೀ ಜಿದ್ದಾ ಜಿದ್ದಿ ಏರ್ಪಟ್ಟಿದ್ದ ಜಿಲ್ಲಾ ಮದ್ಯವರ್ತಿ ಬ್ಯಾಂಕ್ (KDCC) ಚುನಾವಣೆ ಮುಗಿದು ಎಲ್ಲಾ ಕ್ಷೇತ್ರ ನಿರ್ದೇಶಕರ ಆಯ್ಕೆಯಾಗಿದ್ದು ನಾಳೆ (ಸೋಮವಾರ) ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ.
ಸಚಿವ ಮಂಕಾಳು ವೈದ್ಯ ಹಾಗೂ ಶಾಸಕ ಶಿವರಾಮ್ ಹೆಬ್ಬಾರ ಅವರ ಜಂಗಿ ಕುಸ್ತಿಯಲ್ಲಿ ಹೆಬ್ಬಾರ್ ಬಣ 16 ನಿರ್ದೇಶಕರಲ್ಲಿ 11 ನಿರ್ದೇಶಕರು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ KDCC ಬ್ಯಾಂಕ್ ನೂತನ ಅಧ್ಯಕ್ಷರಾಗುವುದು ಖಚಿತವಾಗಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಪ್ರಾರಂಭವಾಗಿದೆ.
ಭೌಗೋಳಿಕ ಪ್ರಾತಿನಿಧ್ಯ ನೀಡುವ ಹಿನ್ನೆಲೆಯಲ್ಲಿ ಕಳೆದಬಾರಿ ಮೋಹನದಾಸ್ ನಾಯ್ಕ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು. ಈ ಬಾರಿ ಮೋಹನದಾಸ್ ನಾಯ್ಕ್ ಸೋತು ಅವರ ಕ್ಷೇತ್ರದಿಂದ ಗೋಕರ್ಣದ ಮೋಹನ್ ನಾಯ್ಕ ಆಯ್ಕೆ ಯಾಗಿದ್ದಾರೆ.
ಶಿವರಾಮ್ ಹೆಬ್ಬಾರ್ ಅಧ್ಯಕ್ಷರಾದರೆ ಈ ಬಾರಿಯೂ ಘಟ್ಟದ ಕೆಳಗಿನನವರಿಗೆ ಉಪಾಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ. ಒಂದೊಮ್ಮೆ ಘಟ್ಟದ ಕೆಳಗಿನ ತಾಲೂಕಿನ ಪ್ರತಿನಿಧಿಗಳಿಗೆ ಉಪಾಧ್ಯಕ್ಷ ಪಟ್ಟ ನೀಡುವುದಾದರೆ ಕಾರವಾರದ ಪ್ರಕಾಶ ಗುನಗಿ ಹಾಗೂ ಅಂಕೋಲಾದ ಬೀರಣ್ಣ ನಾಯಕ (ಬಾಬು ಸುಂಕೇರಿ) ಮುಂಚೂಣಿಯಲ್ಲಿದ್ದಾರೆ.

ಪ್ರಕಾಶ ಗುನಗಿ, ನಿರ್ದೇಶಕರು KDCC
ಒಂದೊಮ್ಮೆ ಹಿರಿತನದ ಆಧಾರದ ಮೇಲೆ ಉಪಾಧ್ಯಕ್ಷ ಸ್ಥಾನ ನೀಡುವುದೇ ಆದಲ್ಲಿ ಜೊಯಡಾದ ಕೃಷ್ಣ ದೇಸಾಯಿಯವರ ಕೂಪನ್ ಮೇಲಿದೆ. ಸದ್ಯಕ್ಕೆ ಉಪಾಧ್ಯಕ್ಷ ಸ್ಥಾನಕ್ಕಾಗಿ ಈ ಮೂವರಲ್ಲೇ ಬಿರುಸಿನ ಪೈಪೋಟಿ ಪ್ರಾರಂಭವಾಗಿದೆ.
ಪ್ರಕಾಶ ಗುನಗಿ ಹಾಗೂ ಬಾಬು ಸುಕೇರಿ ಗಳಸ್ಯ ಕಂಟಸ್ಯ ಗೆಳೆಯರಾಗಿದ್ದು “ನಮ್ಮಿಬ್ಬರಲ್ಲಿ ಯಾರಿಗಾದೂ ಉಪಾಧ್ಯಕ್ಷ ಸ್ಥಾನ ನೀಡಿ, ಆದರೆ ಈ ಬಾರಿಯೂ ಕರಾವಾಳಿ ತಾಲೂಕಿಗೆ ನೀಡಿ” ಎಂದಿದ್ದಾರೆ ಎಂದು ತಿಳಿದುಬಂದಿದೆ.

ಬೀರಣ್ಣ ನಾಯಕ (ಸುಂಕೇರಿ ಬಾಬು) ನಿರ್ದೇಶಕರು
ಆದ್ರೆ ಜೊಯಿಡಾದ ಕೃಷ್ಣ ದೇಸಾಯಿ ಮಾತ್ರ ಈ ಬಾರಿ ಉಪಾಧ್ಯಕ್ಷ ಸ್ಥಾನ ನನಗೇ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದುಬಂದಿದೆ. ಇತ್ತ ನಿರ್ದೇಶಕರಾಗಿ ಆಯ್ಕೆಯಾದ 10 ಜನರೂ ಹೆಬ್ಬಾರ್ ಅವರ ಪರಮಾಪ್ತರು. ಹೆಬ್ಬಾರ್ ಮಾತ್ರ ಯಾರನ್ನು ಬಿಟ್ಟುಕೊಡುವ ಪರಿಸ್ಥಿತಿಯಲ್ಲಿಲ್ಲ… ಹಾಗಾಗಿ ಮೂವರಲ್ಲಿ ನೀವೇ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದಿದ್ದಾರೆ ಎಂದು ತಿಳಿದು ಬಂದಿದೆ.

ಕೃಷ್ಣಾ ದೇಸಾಯಿ, ನಿರ್ದೇಶಕರು KDCC
ಒಂದೊಮ್ಮೆ ಈ ಮೂವರಲ್ಲಿ ಜಿದ್ದಾಜಿದ್ದಿ ಹೀಗೆ ಮುಂದುವರಿದಲ್ಲಿ ಉಪಾಧ್ಯಕರ ಅವದಿ 20 ತಿಂಗಳಿಗೆ ಸೀಮಿತವಾದರೂ ಆಶ್ಚರ್ಯ ಪಡಬೇಕಾಗಿಲ್ಲ.
