Ankola| ಕನ್ನಡ ವೈಶ್ಯ ವೆಲ್ ಫೇರ್ ಟ್ರಸ್ಟ್‌ನ 10ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ “ಕನ್ನಡ ವೈಶ್ಯ ವಿಜಯ ರತ್ನ ಪ್ರಶಸ್ತಿ–2026” ಪ್ರದಾನ ಸಮಾರಂಭ, ಕನ್ನಡ ವೈಶ್ಯ ಸಮಾಜದ ಪಿಎಚ್‌ಡಿ ಪದವೀಧರರ ಸನ್ಮಾನ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ “ಶ್ರೀ ಗಜಾನನ ಮಹಾಬಲೇಶ್ವರ ನಾಗರಕಟ್ಟೆ ಸ್ಮಾರಕ ಶೈಕ್ಷಣಿಕ ಪ್ರಶಸ್ತಿ–2026” ಪ್ರದಾನ ಕಾರ್ಯಕ್ರಮವನ್ನು ಮೇ 24ರಂದು ಅಂಕೋಲಾದ ಪಿ.ಎಂ. ಜೂನಿಯರ್ ಕಾಲೇಜು ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ನಿವೃತ್ತ ಭಾರತೀಯ ವಾಯುಪಡೆ ಅಧಿಕಾರಿ ಬೆಂಗಳೂರಿನ ವೆಂಕಟರಮಣ ದಾಮೋದರ ಕಸಬೇಕರ್ ಅವರಿಗೆ “ಕನ್ನಡ ವೈಶ್ಯ ವಿಜಯ ರತ್ನ ಪ್ರಶಸ್ತಿ–2026” ಪ್ರದಾನ ಮಾಡಲಾಗುವುದು. ಮುಖ್ಯ ಅತಿಥಿಯಾಗಿ ಕಾರವಾರ ನೌಕಾ ಶಸ್ತ್ರಾಗಾರ ಡಿಪೋ (DFS) ಸ್ಟೇಷನ್ ಅಧಿಕಾರಿ ಪ್ರಶಾಂತ್ ಮಾರುತಿ ನಾಗರಕಟ್ಟೆ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಕನ್ನಡ ವೈಶ್ಯ ವಿದ್ಯಾನಿಧಿ ಅಂಕೋಲಾ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಹಾಗೂ ಶಾರದಾ ಮಹಿಳಾ ಮಂಡಳ ಅಧ್ಯಕ್ಷೆ ಸುಧಾ ಗಣಪತಿ ಶೆಟ್ಟಿ ಉಪಸ್ಥಿತರಿರುವರು. ಕಾರ್ಯಕ್ರಮದ ಬಳಿಕ ಸಂಗೀತ ರಸಮಂಜರಿ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಜಗನ್ನಾಥ ಎನ್ ಶೆಟ್ಟಿ, ಕಡಮೆ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.