Dandeli : ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಗಾಯಗೊಂಡು ನಿತ್ರಾಣವಾಗಿದ್ದ ನವಿಲನ್ನು ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.

ದಾಂಡೇಲಿಯ ಡಿಎಪ್‌ಓ ಮೈದಾನದ ಹಿಂದೆ ನಿತ್ರಾಣಗೊಂಡು ಹಾರಲು ಸಾದ್ಯವಾಗದೇ ಬಿದ್ದಿದ್ದ ನವಿಲನ್ನು ನೋಡಿದ ಗ್ರಾಮಸ್ಥರು, ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ನವಿಲಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.
ನವಿಲಿನ ಕುತ್ತಿಗೆಯ ಭಾಗಕ್ಕೆ ಗಾಯವಾಗಿದ್ದು ಕಾಡು ಪ್ರಾಣಿಗಳ ದಾಳಿಯಿಂದ ಗಾಯ ಆಗಿರಬಹುದು. ಈ ಗಾಯದ ನೋವಿಗೆ ನವಿಲು ನಿತ್ರಾಣವಾಗಿ ಬಿದ್ದಿತ್ತು ಎಂದು ಅಂದಾಜಿಸಲಾಗಿದೆ. ಸದ್ಯ ಗಾಯಗೊಂಡ ನವಿಲು ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದು ಹೆಚ್ಚಿನ ಆರೈಕೆಗಾಗಿ ವನ್ಯಪ್ರಾಣಿಗಳ ಸಂರಕ್ಷಣಾ ಕೆಂದ್ರಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
