Gruhalaxmi Digital Marketing App Karwar| ಪ್ರಸಕ್ತ ಸಾಲಿಗೆ ಮಹಿಳಾ ಉದ್ದಿಮೆದಾರರನ್ನು ನೋಂದಾಯಿಸಲು ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ ಆ್ಯಪ್ ರೂಪಿಸಿದ್ದು, ಅರ್ಹರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
ಮಹಿಳೆಯರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿಗೊಳಿಸಲು, ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರನ್ನು ಮಹಿಳಾ ಉದ್ಯಮಿದಾರರನ್ನಾಗಿ ಮಾಡಲು ಹಾಗೂ ಮಹಿಳೆಯರು ಉತ್ಪಾದಿಸುವ ಹಾಗೂ ತಯಾರಿಸುವ ವಿವಿಧ ವಸ್ತುಗಳಿಗೆ ಉಚಿತ ಮಾರುಕಟ್ಟೆ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಗೃಹಲಕ್ಷ್ಮೀ ಡಿಜಿಟಲ್ ವೇದಿಕೆಯ ಸೌಲಭ್ಯದಲ್ಲಿ ಕಲ್ಪಿಸಲಾಗಿದ್ದು, ಇದರ ಪೂರಕವಾಗಿ ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ ಆ್ಯಫ್ ಅನ್ನು ಲಾಂಚ್ ಮಾಡಲಾಗಿದೆ.
ಉತ್ತರಕನ್ನಡ ಜಿಲ್ಲೆಯ ತಮ್ಮ ವ್ಯಾಪ್ತಿಯಲ್ಲಿ ಬರುವ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪಿನ ಸದಸ್ಯರು, ಎನ್‌ಆರ್‌ಎಲ್‌ಎಂ (NRLM) ಫಲಾನುಭವಿಗಳು, ಅಕ್ಕ ಕೆಫೆ ಘಟಕಗಳನ್ನು ನಿರ್ವಹಿಸುತ್ತಿರುವ ಮಹಿಳೆಯರು, ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಂಘ-ಘಟಕಗಳ ಮಹಿಳಾ ಉದ್ಯಮಿಗಳು, ರುಡ್‌ಸೆಟ್ (ಧರ್ಮಸ್ಥಳ) ಮೂಲಕ ತರಬೇತಿ ಪಡೆದು ಸ್ವ ಉದ್ಯೋಗ ನಡೆಸುತ್ತಿರುವ ಮಹಿಳೆಯರು ಅರ್ಹರಿರುತ್ತಾರೆ.
ನಿಗಮದಿಂದ ಹಾಗೂ ಸರ್ಕಾರದ ವಿವಿಧ ನಿಗಮ ಮಂಡಳಿ ಮತ್ತು ಇಲಾಖೆಗಳಿಂದ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆದ ಮಹಿಳಾ ಫಲಾನುಭವಿಗಳು, ಜಿಲ್ಲಾ ತಾಲ್ಲೂಕು ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರೆ ಯಶಸ್ವಿ ಮಹಿಳಾ ಉದ್ದಿಮೆದಾರರು ತಾವು ತಯಾರಿಸುವ ಉತ್ಪನ್ನಗಳ ಮಾಹಿತಿಯನ್ನು ನೀಡಲು, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಅಭಿವೃದ್ಧಿ ನಿರೀಕ್ಷಕರು ದೂರವಾಣಿ ಸಂಖ್ಯೆ: 9611626140 ಅಥವಾ 9886929405 ನ್ನು ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
