Kumta : ತಾಲೂಕಿನ ಅಘನಾಶಿನಿಯ ಶ್ರೀ ಅಗಸೆ ವಿನಾಯಕ (ಚಿಂತಾಮಣಿ) ದೇವಸ್ಥಾನದಲ್ಲಿ ಹಾಲಕ್ಕಿ ಒಕ್ಕಲು ಸಮಾಜ ಅಘನಾಶಿನಿ ಇವರ ಸಹಯೋಗದಲ್ಲಿ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಿರ್ಜಾನ್ ಶಾಖಾ ಮಠದ ಪೂಜ್ಯರಾದ ಶ್ರೀ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಸಹಸ್ರ ಮೋದಕ ಹವನವನ್ನು ನೆರವೇರಿಸಲಾಯಿತು. ಬೆಳಿಗ್ಗೆ 9 ಗಂಟೆಯಿಂದ ಪೂಜಾ ಕಾರ್ಯಕ್ರಮಕ್ಕೆ ಊರಿನ ಸುತ್ತಮುತ್ತಲಿನ ಸಹಸ್ರಾರು ಭಕ್ತರ ಉಪಸ್ಥಿತರಿದ್ದು ಪ್ರಸಾದ ಭೋಜನ ಸ್ವೀಕರಿಸಿ ದೇವರ ಆಶೀರ್ವಾದ ಪಡೆದರು.

ಸಾಯಂಕಾಲ 7 ಗಂಟೆಗೆ “ಹಾಲಕ್ಕಿ ಸಾಂಸ್ಕೃತಿಕ ಸಂಜೆ ” ಕಾರ್ಯಕ್ರಮವನ್ನು ಸವಿವ ಮಂಕಾಳು ವೈದ್ಯ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾದ ಧರ್ಮೇಶ್ ಶಿರಿಬೈಲ್., ಶ್ರೀಮತಿಬತನುಜಾ ರಂಗಸ್ವಾಮಿ ಗೌಡ, ಯೋಗೇಶ್ ಸಿ.ಕೆ. ಡಿ.ಎಫ್.ಒ. ಹೊನ್ನಾವರ. ದೇವು ಗೌಡ, ಗುರು ಗೌಡರು, ಹನುಮಂತ ಗೌಡ, ಪ್ರಭಾಕರ್ ಗೌಡ, ಗೋವಿಂದ ಗೌಡ, ಶ್ರೀಧರ್ ಗೌಡ. ವಿನಾಯಕ ಟಿ. ಗೌಡ , ವೆಂಕಟರಮಣ ಶಿವಪ್ಪ ಗೌಡ, ಸೇರಿದಂತೆ ಅನೇಕರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಶ್ರೀಧರ ಗೌಡ ಉಪ್ಪಿನಗಣಪತಿ ಅವರು ಅಘನಾಶಿನಿ ಭಾಗದ ಸಮಾಜದ ಸಾಂಸ್ಕೃತಿಕ , ಜನಪದ, ಕಲೆ ಜೀವನ ಶೈಲಿ, ಸಂಘಟನೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು ಸಮಾಜದ ಕಲೆ , ಸಂಸ್ಕೃತಿ, ಜಾನಪದ ಮುಂತಾದವುಗಳಲ್ಲಿ ಹಾಲಕ್ಕಿ ಸಮಾಜದ ಕೊಡುಗೆಯನ್ನು ಸ್ಮರಿಸುವುದರ ಹಾಲಕ್ಕಿ ಸಮುದಾಯದ ಕಾರ್ಯಗಳಿಗೆ ಯಾವತ್ತು ತಮ್ಮ ಸಂಪೂರ್ಣ ಸಹಕಾರ ಬೆಂಬಲ ನೀಡುವುದರ ಜೊತೆಗೆ ಅಘನಾಶಿನಿ ಹಾಲಕ್ಕಿ ಸಮಾಜದ ಸಂಘಟಿತ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿದ್ದ ಧರ್ಮೇಶ್ ಶಿರಿಬೈಲ್ ಮಾತನಾಡಿ ” ಈ ಭಾಗದ ಒಕ್ಕಲಿಗರ ಶಿಕ್ಷಣ, ಉದ್ಯೋಗ, ಕಲೆ , ಸಂಸ್ಕೃತಿ ಮುಂತಾದ ಸಾಮಾಜಿಕ ಕಾರ್ಯಕ್ರಮಕ್ಕೆ ರಾಜ್ಯ ಒಕ್ಕಲಿಗರ ಸಂಘದಿಂದ ಯಾವತ್ತೂ ಸಂಪೂರ್ಣ ಬೆಂಬಲ ಸಹಕಾರವನ್ನು ನೀಡುವುದಾಗಿ ಹೇಳಿದರು.

ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀಮತಿ ತನುಜಾ ರಂಗಸ್ವಾಮಿ ಗೌಡ ಮಾತನಾಡಿ ” ಸಮಾಜದ ಮಹಿಳೆಯವರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ತಮ್ಮ ಧೈರ್ಯ , ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವಂತೆ ಸಮಾಜದ ಮಹಿಳೆಯರಿಗೆ ಕರೆ ನೀಡಿದರು. ವಿವಿಧ ಗಣ್ಯರು ಸಭೆಯಲ್ಲಿ ಮಾತನಾಡಿ ಸಮಾಜ ಶಿಕ್ಷಣ, ಆರೋಗ್ಯ , ಉದ್ಯೋಗ ಕಡೆ ಹೆಚ್ಚು ಗಮನವನ್ನು ನೀಡುವುದರ ಮುಖಾಂತರ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ತಮ್ಮೆಲರ ಸಹಕಾರ ಬೆಂಬಲ ವ್ಯಕ್ತಪಡಿಸುವುದರ ಮುಖೇನ ಮುಂದಿನ ದಿನಗಳಲ್ಲಿಯೂ ಕೂಡ ಇಂತಹ ಕಾರ್ಯಕ್ರಮ ನಡೆಸುವಂತೆ ಪ್ರೋತ್ಸಾಹಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ಹಾಲಕ್ಕಿ ಸಮಾಜದ ಜಿಲ್ಲೆಯ ಸುಮಾರು 20ಕ್ಕೂ ಹೆಚ್ಚಿನ ಹಳ್ಳಿಗಳಿಂದ ಸುಗ್ಗಿ, ಕೋಲಾಟ, ವೀರಗಾಸೆ , ಜನಪದ ನೃತ್ಯ ಮುಂತಾದ ಕಾರ್ಯಕ್ರಮಗಳು ಮುಂಜಾನೆಯವರೆಗೂ ನೆರೆದ ಅಪಾರ ಜನಸ್ತೋಮ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ಮಾರುತಿ ಗೌಡ ಸ್ವಾಗತ ಕೋರಿದರು, ರವಿ ಗೌಡ ವಂದಿಸಿದರು ದಿನೇಶ್ ಗೌಡ ನಿರೂಪಿಸಿದರು. ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದು ಗಣ್ಯರಿಗೆ ಸ್ವಾಗತಿಸಿ ನೆನಪಿನ ಕಾಣಿಕೆ ನೀಡಿ ಬೀಳ್ಕೊಡುವುದರ ಮುಖಾಂತರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಡುವಲ್ಲಿ ಸಹಕರಿಸಿದರು.
