Karwar| ಕೆ.ಎಲ್.ಇ. ಸಮೂಹ ಸಂಸ್ಥೆಗಳ ಅಂಕೋಲಾದ ಕಾರ್ಯದರ್ಶಿ ಡಾ. ದಿನೇಶ್ ಭಟ್ಕಳ ಅವರ ಸಾವಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕಂಬನಿ ಮಿಡಿದಿದ್ದಾರೆ.
ಅವರು ತಮ್ಮ ಶೋಕ ಸಂದೇಶದಲ್ಲಿ, ಡಾ. ದಿನೇಶ ಭಟ್ಕಳ ಅವರ ಅಕಾಲಿಕ ನಿಧನ ಆಘಾತ ಉಂಟುಮಾಡಿದೆ.
ತಮ್ಮ ಪ್ರಾಮಾಣಿಕತೆ, ಕಟ್ಟುನಿಟ್ಟಿನ ಶಿಸ್ತು ಹಾಗೂ ನಿಸ್ವಾರ್ಥ ಸೇವೆಯ ಮೂಲಕ ಅಂಕೋಲಾದ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಕೇವಲ ಒಬ್ಬ ದಕ್ಷ ಆಡಳಿತಗಾರರಾಗಿ ಮಾತ್ರವಲ್ಲದೆ, ಮಾನವೀಯತೆಯ ಪ್ರತೀಕವಾಗಿ ಅವರು ಸಲ್ಲಿಸಿದ ಸೇವೆ ಅನನ್ಯವಾದದ್ದು. ಅವರ ನಿಧನದಿಂದ ಶಿಕ್ಷಣ ಕ್ಷೇತ್ರ, ವೈದ್ಯಕೀಯ ರಂಗ ಹಾಗೂ ಇಡೀ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಕಾಲನ ನಿರ್ಣಯದಂತೆ ಅವರು ಇಂದು ನಮ್ಮನ್ನಗಲಿರಬಹುದು, ಆದರೆ ಅವರು ಬಿಟ್ಟುಹೋದ ಆದರ್ಶಗಳು, ಸಾಧನೆಗಳು ಮತ್ತು ನೆನಪುಗಳು ನಮ್ಮ ಹೃದಯದಲ್ಲಿ ಎಂದಿಗೂ ಜೀವಂತ. ಮೃತರ ಆತ್ಮಕ್ಕೆ ಭಗವಂತ ಸದ್ಗತಿಯನ್ನು ಕರುಣಿಸಲಿ, ಹಾಗೂ ಈ ತೀವ್ರ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೂ, ಹಿತೈಷಿಗಳಿಗೂ ಮತ್ತು ಅಸಂಖ್ಯಾತ ಅಭಿಮಾನಿಗಳಿಗೂ ನೀಡಲಿ ಎಂದು ಸಂಸದ ಕಾಗೇರಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
