ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕ್ರಿಕೇಟಿಗ ರಿಂಕು ಸಿಂಗ್ ಅವರ ತಂದೆ ಖಾನ್‌ಚಂದ್ ಸಿಂಗ್ ಅವರು ಇಂದು ನಿಧನರಾಗಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಗ್ರೇಟರ್ ನೋಯ್ಡಾದ ಯಥಾರ್ಥ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇತ್ತೀಚಿಗೆ ಅವರ ಆರೋಗ್ಯ ಗಂಭೀರವಾಗಿ ಕ್ಷೀಣಿಸಿದ ಹಿನ್ನೆಲೆಯಲ್ಲಿ ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು.
ಆದ್ದರಿಂದ ರಿಂಕು ಸಿಂಗ್ ಅವರು ಜಿಂಬಾಬ್ವೆ ತಂಡದ ವಿರುದ್ಧ ನಡೆದ ಸೂಪರ್ 8 ಪಂದ್ಯದ ಮೊದಲೇ ಮನೆಗೆ ವಾಪಸ್ಸ್ ಆಗಿದ್ದರು. ಅಪ್ಪನ ಅನಾರೋಗ್ಯದ ಸ್ಥಿತಿಯಲ್ಲೂ ರಿಂಕು ಸಿಂಗ್ T20 worldcup ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಅಪ್ಪನ ಆರೋಗ್ಯ ತೀರಾ ಕ್ಷೀಣಿಸಿದ ಹಿನ್ನೆಲೆಯಲ್ಲಿ ಪಂದ್ಯ ಬಿಟ್ಟು ಮನೆಗೆ ವಾಪಸ್ಸು ಆಗಿದ್ದರು.
ರಿಂಕು ಸಿಂಗ್ ಅವರ ತಂದೆ ಖಾನ್‌ಚಂದ್ ಸಿಂಗ್ ಅವರವ ನಿಧನಕ್ಕೆ ಖ್ಯಾತ ಕ್ರಿಕೇಟಿಗ ಹರ್ಬಜನ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
