ಕಾರವಾರ| ನಿಲ್ಲಿಸಿದ್ದ ವಾಹನಕ್ಕೆ ಸಾರಿಗೆ ಬಸ್ಸ್ ಗುದ್ದಿದ ಪರಿಣಾಮ ಏಕಕಾಲದಲ್ಲಿ ಮೂರು ವಾಹನಗಳು ಜಖಂ ಆದ ಘಟನೆ ನಗರದ ಪ್ರಿಮಿಯರ್ ಹೊಟೇಲ್ ಬಳಿ ನಡೆದಿದೆ.

ಕಾರವಾರದಿಂದ ಚಿತ್ತಾಕುಲಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ನಗರದ ಗ್ರೀನ್  ಸ್ಟ್ರೀಟ್ ಮಾರ್ಗದಿಂದ ಸಾಗುವ ಸಂದರ್ಭದಲ್ಲಿ  ಪ್ರೀಮಿಯರ್ ಹೊಟೇಲ್ ಬಳಿ ನಿಲ್ಲಿಸಿಟ್ಟ ಸ್ವಿಫ್ಟ್  ವಾಹನಕ್ಕೆ ಗುದ್ದಿದೆ. ಪರಿಣಾಮ ಅದರ ಪಕ್ಕದಲ್ಲಿಯೇ ಇದ್ದ ಇನ್ನೊವಾ, ಫೊರ್ಡ್  ಸೇರಿದಂತೆ ಹಲವು ಕಾರುಗಳು ಜಖಂ ಆಗಿದೆ.

ನಿಲ್ಲಿಸಿಟ್ಟ ತಮ್ಮ ಬೆಲೆಬಾಳುವ ಕಾರು ಜಖಂ ಆಗಿದ್ದನ್ನು ಕಂಡು ವಾಹನ ಮಾಲೀಕರು ಕೆಂಡಾಂಮಡಲವಾಗಿ ಸಾರಿಗೆ ಚಾಲಕನ‌ ವಿರುದ್ಧ ಹರಿಹಾಯ್ದಿದ್ದಾರೆ. ಕೆಲ ಕಾಲ ಗಲಾಟೆ ವಾತಾವರಣ ಸಹ ನಿರ್ಮಾಣವಾಗಿತ್ತು. ಪೋಲಿಸರು ಸ್ಥಳಕ್ಕೆ ಆಗಮಿಸಿ ವಾತಾವರಣ ತಿಳಿ ಮಾಡಿದರು.

ಗ್ರೀನ್ ಸ್ಟ್ರೀಟ್ ಮಾರ್ಗದಲ್ಲಿರುವ ಹೋಟೆಲ್ ಗಳಿಗೆ ಆಗಮಿಸಿದ ವಾಹನಗಳನ್ನು ರಸ್ತೆ ಮೇಲೆಯೇ ಪಾರ್ಕಿಂಗ್ ಮಾಡಲಾಗುತ್ತಿದ್ದು, ವಾಹನ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂಬುದು ಹಲವು ದಿನಗಳಿಂದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಸಂಚಾರಿ ಪೋಲಿಸರು  ರಸ್ತೆ ಮೇಲೆ ನಿಲ್ಲಿಸುವ ವಾಹನಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಮತ್ತೆ ಕೇಳಿ ಬಂದಿದೆ.