ಆತ್ಮಲಿಂಗದ ದರ್ಶನಕ್ಕೆ ಬರುವ‌ ಭಕ್ತಾದಿಗಳಿಗೆ ಗೋಕರ್ಣದ ಮಹಾಬಲೇಶ್ವರ ಟ್ಯಾಕ್ಷಿ ಚಾಲಕ ಮಾಲಕ ಸಂಘದಿಂದ ಕುಡಿಯುವ ನೀರು ಹಾಗೂ ಲಘು ಉಪಹಾರದ ವ್ಯವಸ್ಥೆ ಮಾಡಲಾಯಿತು.

ಶಿವರಾತ್ರಿಯ ದಿನವಾದ ಇಂದು ಶ್ರೀ ಕ್ಷೇತ್ರ ಗೋಕರ್ಣಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಫೆಬ್ರವರಿಯ ಬೆಂಕಿಯಂತ ಬಿಸಿಲಿನ ಬೇಗೆಯಲ್ಲಿ ದಣಿದು ಬರುವ ಪ್ರವಾಸಿಗರಿಗೆ ಹಾಗೂ ಭಕ್ತಾದಿಗಳಿಗೆ ಗೋಕರ್ಣದ ಟ್ಯಾಕ್ಸಿ ಚಾಲಕ ಹಾಗೂ ಮಾಲಕರ ಸಂಘದಿಂದ ಕುಡಿಯುವ ನೀರು ಹಾಗೂ ಲಘು ಉಪಹಾರದ ಸೇವೆ ನೀಡುತ್ತಿದ್ದು ಈ ಸೇವೆಯನ್ನು ಬರುವ ಎಲ್ಲಾ ಭಕ್ತಾದಿಗಳು ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷ ಅನಂತ ಗೌಡ ಹಾಗೂ ಕುಮಾರ ದಿವಟಗಿ ವಿನಂತಿಸಿದರು.

ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕರಾವಳಿ ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ಭಾಸ್ಕರ್ ಪಟಗಾರ ಮಾತನಾಡಿ “ಅನಂತ ಗೌಡ ಹಾಗೂ ಕುಮಾರ್ ದಿವಟಗಿ ತಂಡದ ಕ್ರೀಯಾಶೀಲವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ವರ್ಷವಿಡಿ ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಪ್ರವಾಸಿಗರಿಂದ ಜೀವನ ನಡೆಸುವ ಟ್ಯಾಕ್ಷಿ ಚಾಲಕ ಮಾಲಕರು ಇಂದು ಗೋಕರ್ಣಕ್ಕೆ ಬರುವ ಪ್ರತಿಯೊಬ್ಬರಿಗೂ ಕುಡಿಯುವ ನೀರು ಹಾಗೂ ಲಘು ಉಪಹಾರ ನೀಡುವ ಮೂಲಕ ಅತಿಥಿ ಸತ್ಕಾರ ಮಾಡಿದಂತೆ” ಎಂದರು.

ಇನ್ನೂ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಪ್ರದೀಪ್ ನಾಯಕ, ಕೆ.ಡಿ.ಸಿ.ಸಿ ನಿರ್ದೇಶಕ ಮೋಹನ ನಾಯ್ಕ ಸೇರಿದಂತೆ ಅನೇಕರು ಇದ್ದರು.