Bangalore| ಬೆಂಗಳೂರು ಬಳಿಯ ದಾಬಸಪೇಟೆ‌ ಪೋಲಿಸ್ ಠಾಣೆಯಲ್ಲಿ‌ ದಾಖಲಾಗಿರುವ ಹಲ್ಲೆ ಪ್ರಕರಣದಲ್ಲಿ ತನ್ನ ಪುತ್ರ ಅಶುತೋಷ್ ನ‌ ಕೈ ಬಿಡುವಂತೆ ಮಾಜಿ ಸಚಿವ ಅನಂತಕುಮಾರ ಹೆಗಡೆ ಪರ ವಕೀಲ ಪವನಚಂದ್ರ ಶೆಟ್ಟಿ ನ್ಯಾಯಾಲಯಕ್ಕೆ ಕೋರಿದ್ದಾರೆ.

ಅನಂತಕುಮಾರ ಹೆಗಡೆ ಪುತ್ರ ಅಶುತೋಷ್‌ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು, ಹಾಲಿ ಪ್ರಕರಣವು ಅವರ ಪಾಸ್‌ಪೋರ್ಟ್‌ ಪಡೆಯುವುದಕ್ಕೆ ಅಡ್ಡಿಯಾಗಿದೆ. ಹೀಗಾಗಿ, ಅವರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಹೆಗಡೆ ಪರ ವಕೀಲ ಪವನ್‌ಚಂದ್ರ ಶೆಟ್ಟಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಬಾರ್ & ಬೆಂಚ್‌ನ ವರದಿ

ಪುತ್ರ ಅಶುತೋಷ್‌ ಹೆಗಡೆ ಅವರು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು, ಗಲಾಟೆ ಪ್ರಕರಣದಿಂದಾಗಿ ಅವರು ಪಾಸ್‌ಪೋರ್ಟ್‌ ಪಡೆಯಲು ಸಮಸ್ಯೆಯಾಗಿದೆ. ಹೀಗಾಗಿ, ಅವರನ್ನು ಕೈಬಿಡಬೇಕು ಎಂದು ಮಾಜಿ ಸಂಸದ ಅನಂತಕುಮಾರ್‌ ಹೆಗಡೆ ಪರ ವಕೀಲರು ಕರ್ನಾಟಕ ಹೈಕೋರ್ಟ್‌ಗೆ ಮನವಿ ಮಾಡಿದ್ದರು. ವಿದೇಶದಿಂದ ಬಂದಿದ್ದ ಪುತ್ರ ಅಶುತೋಷ್‌ ಹೆಗಡೆ ಅವರು ತನ್ನ ಅಜ್ಜಿ-ಅವರನ್ನು ನೋಡಲು ಅನಂತಕುಮಾರ್‌ ಜೊತೆ ಯಲ್ಲಾಪುರಕ್ಕೆ ತೆರಳುತ್ತಿದ್ದರು.

ಈ ಸಂದರ್ಭದಲ್ಲಿ ಚತ್ತೀಸಗಢ ರಾಜ್ಯದಲ್ಲಿ ನೋಂದಣಿಯಾಗಿರುವ ಇನ್ನೋವಾ ಕ್ರಿಸ್ಟಾ ಕಾರು ತಮ್ಮ ಕಾರನ್ನು ಹಿಂದಿಕ್ಕಲು ಪ್ರಯತ್ನಿಸಿತ್ತು. ಒಮ್ಮೆ ಅನಂತಕುಮಾರ್‌ ಕಾರಿಗೂ ಡಿಕ್ಕಿ ಹೊಡೆಯಿತು. ಈ ಹಿನ್ನೆಲೆಯಲ್ಲಿ ಮಾಜಿ ಸಂಸದರ ಅಂಗ ರಕ್ಷಕ ಮತ್ತು ಚಾಲಕ ದೂರುದಾರರ ಜೊತೆ ವಾಗ್ವಾದ ನಡೆಸಿದ್ದರು. ಇದರಲ್ಲಿ ಅನಂತಕುಮಾರ್‌ ಪಾತ್ರವಾಗಲಿ, ಅವರ ಪುತ್ರ ಅಶುತೋಷ್‌ ಪಾತ್ರವಾಗಲಿ ಇಲ್ಲ. ಇನ್ನೋವಾ ಕ್ರಿಸ್ಟಾ ಕಾರ್‌ನ ಹಿಂದಿನ ಸೀಟಿನಲ್ಲಿ ಅಶುತೋಷ್‌ ಕುಳಿತಿದ್ದರು.

ಘಟನಾ ಸ್ಥಳಕ್ಕೆ ಅವರು ಬಂದೇ ಇರಲಿಲ್ಲ. ಮಧ್ಯದ ಸೀಟುಗಳನ್ನು ತೆಗೆದರೆ ಮಾತ್ರ ಅದರಿಂದ ಹಿಂದಿನ ಸೀಟಿನಲ್ಲಿರುವವರು ಇಳಿಯಲು ಸಾಧ್ಯ. ಹೀಗಿದ್ದರೂ ತನಿಖೆಯ ಸಂದರ್ಭದಲ್ಲಿ ತನಿಖಾಧಿಕಾರಿಯು ಅಶುತೋಷ್‌ ಅವರನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ವಕೀಲ‌ ಪವನಚಂದ್ರ ಶೆಟ್ಟಿ ಆಕ್ಷೇಪಿಸಿದರು.

ದೂರುದಾರ ಸೈಫ್‌ ಖಾನ್‌ ಪರ ವಕೀಲೆ ನವ್ಯಾಶ್ರೀ ಅವರು ವಿಚಾರಣೆಯಲ್ಲಿ ಭಾಗಿಯಾಗಿದ್ದರು. ಎಲ್ಲರ ವಾದ ಆಲಿಸಿದ ನ್ಯಾಯಾಲಯವು ಏಪ್ರಿಲ್‌ ೧೬ರ ವಿಚಾರಣೆಯಂದು ಅಶುತೋಷ್‌ ಮನವಿ ಪರಿಗಣಿಸುವುದಾಗಿ ಹೇಳಿ, ವಿಚಾರಣೆ ಮುಂದೂಡಿತು. ಈ ಬಗ್ಗೆ ಬಾರ್ & ಬೆಂಚ್ ವರದಿ ಮಾಡಿದೆ.