Bhatkal|Drugs|Narcotic Drugs and Psychotropic Substances Act| ಗಾಂಜಾ ಅಮಲಿನಲ್ಲಿ ತೆಲಾಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು‌ ಬಂಧಿಸಿ, ಪ್ರಕರಣ ದಾಖಲಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ.

ಭಟ್ಕಳದ ಯಲ್ವಡಿಕಾವೂರನ  ಅಬ್ದುಲ್ ಆಲೀಂ ಜಬಾಲಿ ತಂದೆ ಮಹ್ಮದ್ ಸಲಾವುದ್ದೀನ ಜಬಾಲಿ (27) ಹಾಗೂ ಭಟ್ಕಳದ ಬಿಲಾಲ್‌ ಮಸೀದಿ ಒಂದನೇಯ ಕ್ರಾಸ್ ನ ಮಹ್ಮದ್ ಮೂಯಿಸ್ ತಂದೆ ಸಿರಾಜುದ್ದೀನ್ ( 25) ಎಂಬಿಬ್ಬರು ಬಂಧಿತರು.

ಈ ಇಬ್ಬರು ಯುವಕರು ಭಟ್ಕಳ ಶಹರದ ನೀಲಾವರ ಲಾಡ್ಡ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ ಮಾಡಿ, ಅಮಲಿನಲ್ಲಿ ತೆಲಾಡುತ್ತಿದ್ದರು. ಆಗ ಪೋಲಿಸರು ಸಂಶಯದ ಮೇಲೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಪೋಲಿಸ್ ವಿಚಾರಣೆಯಲ್ಲಿ ಸತ್ಯ ಬಾಯ್ಬಿಟ್ಟ ಈ ಇಬ್ಬರು ಯುವಕರು ಗಾಂಜಾ ಸೇವನೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಪೋಲಿಸರು ವೈದ್ಯಕೀಯ ಪರೀಕ್ಷೆಯನ್ನು ಭಟ್ಕಳ ತಾಲೂಕಾ ಸರಕಾರಿ ಆಸ್ಪತ್ರೆಯ ವೈದ್ಯರಿಂದ ನಡೆಸಿದಾಗ ಇಬ್ಬರೂ ಯುವಕರು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದೆ.

ಪೋಲಿಸರು ಇಬ್ಬರು ಆರೋಪಿಗಳ ಮೇಲೆ ಎನ್.ಡಿ.ಪಿ.ಎಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.