Karwar| ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರವಾರ ಭೇಟಿ ಹಿನ್ನೆಲೆಯಲ್ಲಿ ಫೆ.22ರ ವಾರದ ಸಂತೆಯ ಸ್ಥಳವನ್ನು ಸ್ಥಳಾಂತರಿಸಲಾಗಿದೆ.
ಸಿ.ಎಂ ನಗರ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡಿದ್ದು, ಅಂದು ಕಾರವಾರ ವೈದ್ಯಕೀಯ ಸಂಸ್ಥೆಯಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮುಖ್ಯಮಂತ್ರಿಗಳ ಪ್ರವಾಸ ಹಿನ್ನಲೆಯಲ್ಲಿ ಸಂಚಾರಕ್ಕೆ ಯಾವುದೇ ಅಡತಡೆಯಾಗದಂತೆ ಮುಕ್ತ ಸಂಚಾರಕ್ಕೆ ಅನುವು ಮಾಡುವ ಸಲುವಾಗಿ ಫೆ.22 ರಂದು ನಡೆಯುವ ಸಂತೆಯನ್ನು ದೋಭಿಘಾಟ ರಸ್ತೆಗೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ.
ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಸಹಕರಿಸುವಂತೆ ಕಾರವಾರ ನಗರಸಭೆ ಪೌರಯುಕ್ತರು ತಿಳಿಸಿದ್ದಾರೆ.
