ಭೋಪಾಲ್: ಪಿಯುಸಿ ವಿದ್ಯಾರ್ಥಿನಿಯೋರ್ವಳನ್ನು ಲಾಂಗ್ ರೈಡ್ ಕರೆದೊಯ್ದಿದ್ದ ಅನ್ಯಕೋಮಿನ ಯುವಕನೋರ್ವ ಆಕೆಯನ್ನು ಅತ್ಯಾ**ಚಾರ ಮಾಡಿದಲ್ಲದೇ, ವಿಡಿಯೋ ತೆಗೆದು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಅಲ್ಲದೇ, ಇಸ್ಲಾಂಗೆ ಮತಾಂತರವಾಗು, ಇಲ್ಲದಿದ್ರೆ ನಿನ್ನ ವಿಡಿಯೋ ವೈರಲ್ ಮಾಡ್ತೇನೆ ಎಂದು ಬೆದರಿಕೆ ಹಾಕಿದ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ನಡೆದಿದೆ.

ಈ ಪ್ರಕರಣ ಸಂಬಂಧಿಸಿ ಸ್ಥಳೀಯ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದು, ಈಗಾಗಲೇ ತನಿಖೆ ಮುಂದುವರಿಸಿದ್ದಾರೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ವಿದ್ಯಾರ್ಥಿನಿ ಭೋಪಾಲದ ಶಹಪುರ ಪ್ರದೇಶದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಥಮ ವರ್ಷದ ಪಿಯುಸಿ ಓದುತ್ತಿದ್ದಳು. ಆಕೆಗೆ ಇನ್ನೋರ್ವ ಸ್ನೇಹಿತನ ಮೂಲಕ ಔಸಾಫ್ ಅಲಿ ಖಾನ್ ಎಂಬ ದುರುಳನ ಪರಿಚಯವಾಗಿತ್ತು.

ಇಬ್ಬರ ನಡುವೆ ಸ್ನೇಹ ಬೆಳೆದ ನಂತರ, ಔಸಾಫ್ ಅಲಿ ಖಾನ್, ಕಾಲೇಜು ವಿದ್ಯಾರ್ಥಿನಿಯನ್ನು ಲಾಂಗ್ ಡ್ರೈವ್ ಹೋಗೋಣ ಅಂತಾ ತನ್ನ ಕಾರಿನಲ್ಲಿ ಕಾಡುಗಳಿರುವ ನಿರ್ಜನ ಪ್ರದೇಶ ಖಾನೂಗಾಂವ್‌ಗೆ ಕರೆದೊಯ್ದಿದ್ದ. ಸ್ನೇಹಿತನ ಮೇಲೆ ನಂಬಿಕೆ ಇಟ್ಟು ಆಕೆ ತೆರಳಿದ್ದು, ಅಲ್ಲಿ ಆಕೆಯ ಮೇಲೆ ಅತ್ಯಾ**ಚಾರ ಎಸಗಿದ್ದಾನೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಆರೋಪಿ ಮೊದಲೇ ಆಕೆಯನ್ನು ದುರ್ಬಳಕೆ ಮಾಡಿಕೊಳ್ಳಲು ಪ್ಲ್ಯಾನ್ ಹಾಕಿದ್ದ.

ಅಂದಹಾಗೆ, ಆರೋಪಿ ಔಸಾಫ್‌ ಅಲಿ ಖಾನ್ ಕಾರಿನಲ್ಲಿ ತನ್ನ ಸ್ನೇಹಿತ ಮಾಜ್ ಖಾನ್ ಎಂಬಾತನನ್ನೂ ಕರೆದೊಯ್ದಿದ್ದ. ಜಿಮ್ ನಡೆಸುತ್ತಿದ್ದ ಮಾಜ್, ತನ್ನ ಸ್ನೇಹಿತನ ಕೃತ್ಯಕ್ಕೆ ಸಾಥ್ ನೀಡಿದ್ದ. ಈತ ಕಾರಿನ ಹೊರಗೆ ನಿಂತುಕೊಂಡು ವಿದ್ಯಾರ್ಥಿನಿಯನ್ನು ಅತ್ಯಾ**ಚಾರ ಮಾಡೋದನ್ನು ವಿಡಿಯೋ ಮಾಡಿಕೊಂಡಿದ್ದ. ನಂತರ ಇಬ್ಬರು ಆರೋಪಿಗಳು ಅದೇ ವಿಡಿಯೋ ಮೂಲಕ ವಿದ್ಯಾರ್ಥಿನಿಗೆ ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದರು. ವಿಡಿಯೋ ವೈರಲ್ ಮಾಡೋದು ಬೇಡವಂದ್ರೆ 1 ಲಕ್ಷ ರೂ. ನೀಡುವಂತೆ ವಿದ್ಯಾರ್ಥಿನಿಗೆ ಬೇಡಿಕೆ ಇಟ್ಟಿದ್ದಾರೆ. ಬ್ಲ್ಯಾಕ್‌ಮೇಲ್‌ಗೆ ಹೆದರಿದ ವಿದ್ಯಾರ್ಥಿನಿ ಹೇಗೋ ಕಷ್ಟಪಟ್ಟು 40 ಸಾವಿರ ರೂ. ಅವರಿಗೆ ನೀಡಿದ್ದಳು. ಆದರೂ, ಆರೋಪಿಗಳು ವಿದ್ಯಾರ್ಥಿನಿಗೆ ಕಿರುಕುಳ ನೀಡೋದನ್ನು ಮುಂದುವರಿಸಿದ್ದಾರೆ.

ಈ ದುಷ್ಕರ್ಮಿಗಳು ವಿದ್ಯಾರ್ಥಿನಿಯನ್ನು 4 ಬೇರೆ ಬೇರೆ ಕಾರುಗಳಲ್ಲಿ ಕೂಡಿಹಾಕಿ ಹಲ್ಲೆ ಕೂಡಾ ಮಾಡಿದ್ದಾರೆ. ಆಕೆಯನ್ನು ಕೂಡಿ ಹಾಕಿ ಹಲ್ಲೆ ನಡೆಸಿದ ಎರಡು ಸೆಡಾನ್, ಒಂದು ಮಹೀಂದ್ರಾ ಥಾರ್ ಹಾಗೂ ಇನ್ನೊಂದು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿದ್ಯಾರ್ಥಿನಿ ಆರೋಪಿಗಳನ್ನು ಬ್ಲಾಕ್ ಮಾಡಿದಾಗ, ಆರೋಪಿ ಔಸಾಫ್ ಆಕೆಯನ್ನು ಅತ್ಯಾ**ಚಾರ ಮಾಡಿದ ವಿಡಿಯೋವನ್ನು ಆಕೆಯ ಸ್ನೇಹಿತರಿಗೆ ಕಳುಹಿಸಿದ್ದಾನೆ. ಅಲ್ಲದೇ, ಇಸ್ಲಾಂಗೆ ಮತಾಂತರವಾಗಿ ನಮಾಜ್ ಮಾಡುವಂತೆ ಆಕೆಯ ಮೇಲೆ ಒತ್ತಡ ಹಾಕಿದ್ದಾನೆ. ಈ ಟಾರ್ಚರ್ ತಡೆಯಲಾರದೇ ವಿದ್ಯಾರ್ಥಿನಿ ನಡೆದ ಎಲ್ಲಾ ಘಟನೆಯನ್ನು ತನ್ನ ಕುಟುಂಬಕ್ಕೆ ತಿಳಿಸಿದ್ದಾಳೆ. ಬಳಿಕ ಹಿಂದೂ ಸಂಘಟನೆಗಳ ಸಹಾಯದಿಂದ ಆಕೆಯ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣದ ಗಂಭೀರತೆ ಗಮನಿಸಿ, ವಿಶೇಷ ತನಿಖಾ ತಂಡ (SIT) ಕೂಡಾ ರಚಿಸಲಾಗಿದೆ. ಸಹಾಯಕ ಪೊಲೀಸ್ ಕಮಿಷನರ್ ನೇತೃತ್ವದ ಈ ತಂಡ, ದುಷ್ಕರ್ಮಿಗಳು ಇತರ ಮಹಿಳೆಯರನ್ನು, ಯುವತಿಯರನ್ನು ಇದೇ ರೀತಿ ಟಾರ್ಗೆಟ್ ಮಾಡಿದ್ದಾರೆಯೇ ಹಾಗೂ ಇವರ ಜತೆ ಬೇರೆ ಯಾರ‌್ಯಾರು ಶಾಮೀಲಾಗಿದ್ದಾರೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.