Karwar| ಟಿಪ್ಪರ್ ಅಡ್ಡಗಟ್ಟಿ, ಬೆದರಿಕೆ ಹಾಕಿದ ಇಬ್ಬರ ಮೇಲೆ ಕಾರವಾರ ತಾಲೂಕಿನ ಮಲ್ಲಾಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಯಲ್ಲಾಪುರದ ಟಿಪ್ಪರ್ ಚಾಲಕ ತನಜೀರ್ ಆದಂ ಶೇಖ್ ಎಂಬುವವರೆ ದೂರು ನೀಡಿದ್ದಾರೆ. ಇವರು ಹುಬ್ಬಳ್ಳಿಯ ತಡಸದಿಂದ ಜಲ್ಲಿಕಲ್ಲು ತುಂಬಿಕೊಂಡು ಕೈಗಾಕ್ಕೆ ಬರುತ್ತಿರುವಾಗ ಇಂದು ಶುಕ್ರವಾರ ಫೆ.14 ರ ಬೆಳಗ್ಗೆ 12.15 ರ ಸುಮಾರಿಗೆ ಕೆರವಡಿಯ ರಸ್ತೆಯ ಮೇಲೆ ಟಿಪ್ಪರ್‌ನ್ನು ಅಡ್ಡಗಟ್ಟಿದ ಸ್ಥಳೀಯ ರವಿ ದೇವಿದಾಸ ನಾಯ್ಕ ಹಾಗೂ ಕಿರಣ ದೇವಿದಾಸ ನಾಯ್ಕ ಎಂಬಿಬ್ಬರು, ಬೋ* ಮಗನೇ ಕೈಗಾಕ್ಕೆ ಯಾಕೆ ಬರುತ್ತಿ, ಇದು ನಿಮ್ಮಪ್ಪನ ರೋಡಾ, ಕೆಳಗೆ ಬಾ ನೀನಗೆ ತೋರಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

ಆಗ ಹೆದರಿದ ಟಿಪ್ಪರ್ ಚಾಲಕ ವಾಹನದ ಕಿಟಕಿಯ ಗ್ಲಾಸ್ ಹಾಕಿಕೊಂಡಿದ್ದಾರೆ. ಆಗ ಆರೋಪಿಗಳು ಕಲ್ಲಿನಿಂದ ಟಿಪ್ಪರ್‌ನ ಗ್ಲಾಸ್ ಒಡೆದಿದ್ದಾರೆ. ಅಲ್ಲದೇ ಚಾಲಕನ ಬಲಗೈಗೆ ಗಾಯಗೊಳಿಸಿ, ಮತ್ತೆ ಇದೆ ದಾರಿಯಲ್ಲಿ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ಮಲ್ಲಾಪುರ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
