Karwar|ಕಾರವಾರ: ಶಾಲೆಗೆ ತೆರಳಿದ್ದ ಶಿಕ್ಷಕನ ಮನೆ ಕಳ್ಳರು ದೋಚಿದ ಘಟನೆ ಕಾರವಾರ ತಾಲೂಕಿನ ಸದಾಶಿವಗಡ ಬಳಿಯ ಚಿಂಚೆವಾಡಾದಲ್ಲಿ ನಡೆದಿದೆ.

ಸಿದ್ದರದ ಮಲ್ಲಿಕಾರ್ಜುನ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿರುವ ಸುನೀಲ ರಾಮಚಂದ್ರ ಗಾಂವಕರ್‌ ಎಂಬುವವರ ಮನೆ ಕಳ್ಳತನವಾಗಿದೆ. ಅವರು ಠಾಣೆಗೆ ನೀಡಿದ ತಮ್ಮ ದೂರಿನಲ್ಲಿ, ಫೆ.13 ರ ಬೆಳಗ್ಗೆ 9.15 ರ ಸುಮಾರಿಗೆ ಮನೆಯ ಮುಖ್ಯ ಬಾಗಿಲಿಗೆ ಬೀಗ ಹಾಕಿ ಶಾಲೆಗೆ ತೆರಳಿದ್ದೆ. ಚಿಂಚೆವಾಡಾದಲ್ಲಿರುವ ಅಮೃತಾ ವಿದ್ಯಾಲಯ ಹೈಸ್ಕೂಲಿಗೆ ಹೋಗಿದ್ದ ಮಗಳು ಸಾಯಂಕಲ ೪ ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆ ಕಳ್ಳತನವಾಗಿದ್ದು ತಿಳಿದಿದೆ.

ಕಳ್ಳರು ಮನೆಯ ಮುಖ್ಯ ಬಾಗಿಲಿಗೆ ಹಾಕಿದ್ದ ಬೀಗದ ಕೊಂಡಿಯನ್ನು ಮುರಿದು, ಒಳಹೊಕ್ಕಿ ಮನೆಯ ಬೆಡ್‌ ರೂಮ್‌ನಲ್ಲಿದ್ದ ಕಟ್ಟಿಗೆಯ ಕಪಾಟು ಮತ್ತು ಚಾವಿ ಹಾಕಿದ ಕಬ್ಬಿಣದ ಕಪಾಟನ್ನು ಮುರಿದು ಅದರಲ್ಲಿದ್ದ ನಗದನ್ನು ಕದ್ದೊಯ್ದಿದ್ದಾರೆ.

ಚಿತ್ತಾಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಖೆ ಕೈಗೊಂಡಿದ್ದಾರೆ.