ಕಾರವಾರ: ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕದಳದಲ್ಲಿ ಖಾಲಿ ಇರುವ 89 ಸ್ವಯಂ ಸೇವಕ ಗೃಹರಕ್ಷಕ ಹಾಗು ಗೃಹರಕ್ಷಕಿಯರ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ‌.

ಆಸಕ್ತರು ಕಾರವಾರದ ಕೋಡಿಬಾಗದ ಸರ್ವೋದಯ ನಗರದಲ್ಲಿರುವ ಜಿಲ್ಲಾ ಗೃಹ ರಕ್ಷಕದಳದ ಕಚೇರಿಯಿಂದ 10 ನೇ ತರಗತಿಯ ಧೃಡೀಕೃತ ಅಂಕಪಟ್ಟಿ ಮತ್ತು ಆಧಾರ ಕಾರ್ಡ್ ಪ್ರತಿಯನ್ನು ತೋರಿಸಿ ಅರ್ಜಿಗಳನ್ನು ಪಡೆದುಕೊಂಡು, ನಂತರ ಅರ್ಜಿಯನ್ನು ಭರ್ತಿ ಮಾಡಿ ಅದರೊಂದಿಗೆ ಸಲ್ಲಿಸುವ ದಾಖಲೆಗಳಿಗೆ ಪತ್ರಾಂಕಿತ ಅಧಿಕಾರಿಯವರಿಂದ ದೃಡೀಕೃತ ಸಹಿಯನ್ನು ಮಾಡಿಸಿ ಜಿಲ್ಲಾ ಕಚೇರಿಗೆ ಮಾರ್ಚ 10 ರೊಳಗೆ ತಪ್ಪದೇ ಸಲ್ಲಿಸಬೇಕು. ನಂತರ ಬರುವಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಕಂಪ್ಯೂಟರ್ ಜ್ಞಾನ, ಹೆವಿ ಡ್ರೈವಿಂಗ್ ಲೈಸೆನ್ಸ್, ಮೆಕಾನಿಕ್, ಎನ್.ಸಿ.ಸಿ., ಎನ್.ಎಸ್.ಎಸ್ ಹಾಗೂ ಕ್ರೀಡಾಪಟುಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ಅಭ್ಯರ್ಥಿಗಳು 10 ನೇ ತರಗತಿ ಉತ್ತೀರ್ಣರಾಗಿರಬೇಕು. ವಯಸ್ಸು 19 ರಿಂದ 50 ವರ್ಷದೊಳಗಿನವರಾಗಿರಬೇಕು. ಎತ್ತರ ಕನಿಷ್ಠ 168 ಸೆಂ.ಮೀ ಪುರುಷರಿಗೆ ಮತ್ತು 157 ಸೆಂ.ಮೀ ಮಹಿಳೆಯರಿಗೆ. ಪುರುಷ ಅಭ್ಯರ್ಥಿಗಳ ಎದೆಯ ಸುತ್ತಳತೆ ಕನಿಷ್ಠ 81 ಸೆಂ.ಮೀ ಇರಬೇಕು. ವಿಸ್ತರಿಸಿದಾಗ 86 ಸೆಂ.ಮೀ ಇರಬೇಕು. ತಾಲೂಕು ವೈದ್ಯಾಧಿಕಾರಿಗಳಿಂದ ವೈದ್ಯಕೀಯ ಪ್ರಮಾಣ ಪತ್ರವನ್ನು ಪಡೆದು ಕೊಂಡು ಅರ್ಜಿಯೊಂದಿಗೆ ಲಗತ್ತಿಸಿರಬೇಕು. ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರಬಾರದು ಹಾಗೂ ಪೊಲೀಸ್ ವೆರಿಫಿಕೇಶನ್ ಮಾಡಿಸಿದ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿಬೇಕು.

ಗೃಹರಕ್ಷಕದಳ ಇಲಾಖೆಯಲ್ಲಿ ಗೃಹರಕ್ಷಕ/ಗೃಹರಕ್ಷಕಿ ಸ್ಥಾನಗಳು ಹುದ್ದೆಯಾಗಿರುವುದಿಲ್ಲ. ರಾಜ್ಯ ಸರ್ಕಾರವು ಕಾಲ ಕಾಲಕ್ಕೆ ನಿಗದಿಪಡಿಸುವ ಗೌರವಧನವು ಕರ್ತವ್ಯ ಸಲ್ಲಿಸಿದ ಅವಧಿಗೆ ಮಾತ್ರವೇ ಪಾವತಿಯಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಗೃಹರಕ್ಷದಳದ ಕಚೇರಿ ದೂರವಾಣಿ ಸಂಖ್ಯೆ-08382-200137 ಹಾಗೂ ಗೃಹರಕ್ಷಕದಳದ ಜಿಲ್ಲಾ ಬೋಧಕರು ರಘು ಬಿ.ಸಿ 9880573509 ರವರ ದೂರವಾಣಿ ಸಂಖ್ಯೆಗೆ ಸಂಪರ್ಕಿಸುವಂತೆ ಗೃಹರಕ್ಷಕ ದಳದ ಸಮಾದೇಷ್ಟರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.