ಕಾರವಾರ: ಕದ್ರಾದ ಕೆಪಿಸಿ ಬಸ್‌ ನಿಲ್ದಾಣದ ಮುಂದೆ ಇರುವ ಸರ್ಕಾರಿ ಬಸ್‌ ನಿಲ್ದಾಣದ ಬಳಿ ನಿಲ್ಲಿಸಿದ್ದ ಸ್ಕೂಟಿಯನ್ನು ಕಳ್ಳರು ಕದ್ದೊಯ್ದಿದ್ದಾರೆ.

ಕದ್ರಾದ ದೀಪಕ್ ಕೃಷ್ಣ ಗಡಕರ (59) ಕಾರವಾರ ಬಸ್‌ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಸ್ಟಾಂಡ್ ಇನ್‌ಚಾರ್ಜ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ದೀಪಕ್ ಅವರು ತಮ್ಮ TVS AVENIS ಮಾದರಿಯ ಸ್ಕೂಟಿ (ನಂ. KA-30 EX-5588)ಯನ್ನು ಕದ್ರಾದ ಬಸ್‌ ನಿಲ್ದಾಣದ ಬಳಿ ನಿಲ್ಲಿಸಿದ್ದರು. ಅಂದಾಜು ₹50 ಸಾವಿರ ಮೌಲ್ಯದ ಈ ಸ್ಕೂಟಿಯನ್ನು ಯಾರೋ ಕಳ್ಳರು ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮೊದಲಿಗೆ ತಮ್ಮ ಪರಿಚಯದವರೇ ತಮಾಷೆಗಾಗಿ ಸ್ಕೂಟಿಯನ್ನು ತೆಗೆದುಕೊಂಡಿರಬಹುದು ಎಂದು ಭಾವಿಸಿ ಕೆಲವು ದಿನಗಳು ಕಾಯುತ್ತಿದ್ದುದಾಗಿ, ಆದರೆ ಯಾವುದೇ ಮಾಹಿತಿ ಸಿಗದ ಹಿನ್ನೆಲೆ ಇದೀಗ ಠಾಣೆಗೆ ಬಂದು ದೂರು ನೀಡಿರುವುದಾಗಿ ಅವರು ತಮ್ಮ ತಿಳಿಸಿದ್ದಾರೆ. ಕದ್ರಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.