Karwar: ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಜಿಲ್ಲೆಯ ಎರಡು ಭಾಗಗಳಲ್ಲಿ ಓಸಿ ಮಟ್ಕಾ ಅಡ್ಡೆಗಳ ಮೇಲೆ ಪೋಲಿಸರು ದಾಳಿ ನಡೆಸಿ, ಇಬ್ಬರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಹಳಿಯಾಳ ತಾಲೂಕಿನ ಕಾವಲವಾಡಾದ ಉದಯ ರಾಮಣ್ಣ ನಾರ್ವೇಕರ್‌ (58) ಎಂಬಾತ ಪಟ್ಟಣದ ಹಳೆ ಬಸ್‌ ನಿಲ್ದಾಣದ ಬಳಿ ಜನರಿಂದ ಓಸಿ ಸಂಖ್ಯೆಯನ್ನು ಚೀಟಿಯಲ್ಲಿ ಬರೆಯುವಾಗ, ಪೋಲಿಸರು ದಾಳಿ ಮಾಡಿದ್ದಾರೆ. ಮಟ್ಕಾ ಹಣ ಯಾವ ಬುಕ್ಕಿಗೆ ನೀಡುತ್ತಿ ಎಂದು ಪೋಲಿಸರು ವಿಚಾರಿಸಿದಾಗ, ಹಣವನ್ನು ಯಾವುದೇ ಬುಕ್ಕಿಗೆ ನೀಡದೇ ತಾನೇ ಇಟ್ಟುಕೊಳ್ಳುತ್ತೇನೆ ಎಂದು ಮಾಹಿತಿ ನೀಡಿದ್ದಾನೆ. ದಾಳಿ ಕಾಲಕ್ಕೆ ಪೋಲಿಸರು ಆತನಿಂದ 445 ನಗದು, ಓಸಿ ನಂಬರ್‍ ಚೀಟಿ ಜಫ್ತು ಮಾಡಿ, ಕೆ.ಪಿ ಎಕ್ಟ್‌ ಅಡಿ ಪ್ರಕರಣ ದಾಖಲಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ರಾಮನಗರ ಚರ್ಚ ರಸ್ತೆ ಬಳಿ ಜನರಿಂದ ಓಸಿ ಮಟ್ಕಾ ನಂಬರ್‍ ದಂದೆ ನಡೆಸುವಾಗ ಹನುಮಾನ ಗಲ್ಲಿಯ ದಾಖಲು ಮರಿಯಪ್ಪಾ ಯಳುರಕರ (55) ಎಂಬಾತ ಪೋಲಿಸರ ದಾಳಿ ಸಿಕ್ಕಿಬಿದ್ದಿದ್ದಾನೆ. ಆತನಿಂದ ನಗದು 320 ಹಾಗೂ ಓಸಿ ಚೀಟಿಗಳನ್ನು ಪೋಲಿಸರು ವಶ ಪಡಿಸಿಕೊಂಡಿದ್ದಾರೆ. ಆತನ ಮೇಲೆ ಕೆ.ಪಿ ಎಕ್ಟ್‌ ಅಡಿ ಪ್ರಕರಣ ದಾಖಲಿಸಿದ್ದಾರೆ.