ಕೊಂಕಣ ರೈಲು ಮಾರ್ಗದ ಪ್ರಯಾಣಿಕರಿಗೆ ಸಿಹಿ ಸುದ್ದಿ
Karwar| ಅಹಮದಾಬಾದ್ ಜಂಕ್ಷನ್–ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವ ವಾರದ ವಿಶೇಷ ರೈಲು ಸೇವೆಯನ್ನು ಜುಲೈ 2026ರವರೆಗೆ ವಿಸ್ತರಿಸಲಾಗಿದೆ.
ಪರಿಷ್ಕೃತ ವೇಳಾಪಟ್ಟಿಯಂತೆ ರೈಲು ಸಂಚಾರ ಮುಂದುವರಿಯಲಿದ್ದು, ಅಹಮದಾಬಾದ್ ಮತ್ತು ರೋಹಾ ನಡುವೆ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ರೈಲು ಸಂಖ್ಯೆ 09424 ಅಹಮದಾಬಾದ್–ಮಂಗಳೂರು ವಾರದ ವಿಶೇಷ ರೈಲು ಜುಲೈ 3, 10, 17, 24 ಮತ್ತು 31ರಂದು (ಪ್ರತಿ ಶುಕ್ರವಾರ) ಅಹಮದಾಬಾದ್ ಜಂಕ್ಷನ್ನಿಂದ ಸಂಜೆ 4 ಗಂಟೆಗೆ ಹೊರಟು, ಮರುದಿನ ರಾತ್ರಿ 9 ಗಂಟೆಗೆ ಮಂಗಳೂರು ಜಂಕ್ಷನ್ ತಲುಪಲಿದೆ.
ರೈಲು ಸಂಖ್ಯೆ 09423 ಮಂಗಳೂರು–ಅಹಮದಾಬಾದ್ ವಾರದ ವಿಶೇಷ ರೈಲು ಜುಲೈ 4, 11, 18, 25 ಮತ್ತು ಆಗಸ್ಟ್ 1ರಂದು (ಪ್ರತಿ ಶನಿವಾರ) ರಾತ್ರಿ 10.30ಕ್ಕೆ ಮಂಗಳೂರು ಜಂಕ್ಷನ್ನಿಂದ ಹೊರಟು, ಮೂರನೇ ದಿನ ಬೆಳಗಿನ ಜಾವ 2.15ಕ್ಕೆ ಅಹಮದಾಬಾದ್ ಜಂಕ್ಷನ್ ತಲುಪಲಿದೆ.
ಈ ರೈಲು ಕೊಂಕಣ ರೈಲು ಮಾರ್ಗದಲ್ಲಿ ಕಾರವಾರ, ಅಂಕೋಲಾ, ಗೋಕರ್ಣ ರಸ್ತೆ, ಕುಮಟಾ, ಮುರ್ಡೇಶ್ವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಮಂಗಳೂರು ಭಾಗದ ನಿಲ್ದಾಣಗಳು ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ರೈಲಿನಲ್ಲಿ ಒಟ್ಟು 22 ಬೋಗಿಗಳಿದ್ದು, 2 ಟೈರ್ ಎಸಿ 2 ಬೋಗಿ, 3 ಟೈರ್ ಎಸಿ 4 ಬೋಗಿ, ಸ್ಲೀಪರ್ 12 ಬೋಗಿ, ಸಾಮಾನ್ಯ 2 ಬೋಗಿ ಹಾಗೂ ಎಸ್ಎಲ್ಆರ್ 2 ಬೋಗಿಗಳು ಇರಲಿವೆ.
ಪ್ರಯಾಣಿಕರು ಈ ವಿಶೇಷ ರೈಲು ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.
