ಈತ್ತೀಚಿನ ದಿನಗಳಲ್ಲಿ ಮುಗಿಲೆತ್ತರಕ್ಕೆ ಏರಿಕೆ ಕಂಡಿದ್ದ ಚಿನ್ನದ ದರ ಈಗ ಭಾರಿ ಪಪ್ರಮಾಣದಲ್ಲಿ ಇಳಿಕೆಯಾಗಿದೆ. ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿಯಾಗಿದ್ದು, ಚಿನ್ನ ಖರೀದಿಗೆ ಜನ ಮುಂದಾಗುವ ಸಾಧ್ಯತೆ ಇದೆ.

ಚಿನ್ನ -ಬೆಳ್ಳಿ ದರದಲ್ಲಿ ಭಾರಿ ಏರಿಳಿತ ಆಗುತ್ತಿದ್ರೂ, ಸದ್ಯ ಇಳಿಕೆಯ ಟ್ರೆಂಡ್ನ್ಲಲಿರುವ ಚಿನ್ನದ ಬೆಲೆಯಲ್ಲಿ ನಿನ್ನೆ ಕೂಡಾ ೧೦ ಗ್ರಾಂನಲ್ಲಿ ೨೦೭೦ ರೂಪಾಯಿ ಇಳಿಕೆ ಆಗಿದೆ. ಶುದ್ಧ ಚಿನ್ನದ ಬೆಲೆ  15235 ರೂಪಾಯಿ ಇದ್ದರೆ, ಬಂಗಾರದ ಚಿನ್ನಕ್ಕೆ 13965 ರೂಪಾಯಿ ಇದೆ. ಬೆಳ್ಳಿ ಬೆಲೆಯೂ ೨,೭೫,೦೦೦ ಕ್ಕೆ ಇಳಿದಿದೆ.

ಫೆಬ್ರವರಿ 6, ಶುಕ್ರವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಒಂದೇ ದಿನಕ್ಕೆ 207 ರೂ ಇಳಿಕೆಯಾಗಿದ್ದು, 10 ಗ್ರಾಂ ಗೆ 2070 ರೂ ಇಳಿಕೆ ಆಗಿದೆ. ಆ ಮೂಲಕ 1 ಗ್ರಾಂ ಬೆಲೆ 15235 ರೂ ಆಗಿದ್ದು, 10 ಗ್ರಾಂ ಬೆಲೆ 1,52,350 ರೂಪಾಯಿ ಆಗಿದೆ.
ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 15235 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,52,350 ರೂಪಾಯಿ ಇದೆ. ಕಾರವಾರದಲ್ಲಿ 22 ಕ್ಯಾರೇಟ್ ಚಿನ್ನ ಒಂದು ಗ್ರಾಂ ಗೆ 14075 ರೂಪಾಯಿ ಇದ್ದು 24 ಕ್ಯಾರೇಟ್ ಚಿನ್ನಕ್ಕೆ 14978 ರೂಪಾಯಿಆಗಿದೆ. ಈ ಬೆಲೆಯಲ್ಲಿ ಜಿಎಸ್ಟಿ ಸೇರಿಲ್ಲ, ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ.

ಬೆಳ್ಳಿ ಬೆಲೆ ಇಂದು 25 ರೂಪಾಯಿ ಇಳಿಕೆಯಾಗಿದ್ದು, ಗ್ರಾಂ ಬೆಲೆ 275 ರೂ ಆಗಿದ್ದು, ಕೆಜಿ ಬೆಲೆಯಲ್ಲಿ 25 ಸಾವಿರ ಇಳಿಕೆ ಆಗಿ, ಕೆಜಿಗೆ 2,75,000 ರೂಪಾಯಿ ಇದೆ. ಜನವರಿ 30 ರಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಆರಂಭವಾಗಿದೆ. ಜನವರಿ 1 ಕ್ಕೆ 12380 ರೂಪಾಯಿ ಇದ್ದ ಬೆಲೆ, ಗರಿಷ್ಠ ಬೆಲೆ ಜನವರಿ 29 ಕ್ಕೆ ೧೭,೮೮೫ ರೂಪಾಯಿಗೆ ಹೆಚ್ಚಳ ಆಗಿತ್ತು. ಆದರೆ ಫೆಬ್ರವರಿ ೪ ರಿಂದ ಮತ್ತೆ ಬೆಲೆಯಲ್ಲಿ ಏರಿಕೆ ಇಳಿಕೆ ಪರ್ವ ಆರಂಭ ಆಗಿದ್ದು, ಶುದ್ಧ ಚಿನ್ನದ ಬೆಲೆ ೧ ಲಕ್ಷದ ೫೪ ಸಾವಿರಕ್ಕೆ ಇಳಿಕೆ ಆಗಿದೆ.