Sirsi | ರಾಜ್ಯದ ಪ್ರಮುಖ ಶಕ್ತಿ ಪೀಠಗಳಲ್ಲೊಂದಾದ ಶಿರಸಿಯ ಮಾರಿಕಾಂಬಾ ದೇವಸ್ಥಾನದ ಮುಂದಿನ ಐದು ವರ್ಷಗಳ ಅವಧಿಗೆ ನೂತನ ಧರ್ಮದರ್ಶಿ ಮಂಡಳಿಯನ್ನು ಆಯ್ಕೆ ಮಾಡಲಾಗಿದೆ.
ದೇವಸ್ಥಾನದ ಆಡಳಿತಕ್ಕಾಗಿ ಐವರು ಸದಸ್ಯರ ಧರ್ಮದರ್ಶಿ ಮಂಡಳಿಯನ್ನು ಜಿಲ್ಲಾ ನ್ಯಾಯಾಧೀಶರು ಆಯ್ಕೆ ಮಾಡಿದ್ದು, ನೂತನ ಧರ್ಮದರ್ಶಿ ಮಂಡಳಿಗೆ ನಿವೃತ್ತ ಇಂಜಿನಿಯರ್ ವಿನಾಯಕ ಎಸ್. ಶೇಟ್, ಸಮೃದ್ಧಿ ಮಹಿಳಾ ಮಂಡಳಿಯ ಅಧ್ಯಕ್ಷೆ ಅರ್ಚನಾ ರಾಘವೇಂದ್ರ ಹೊನ್ನಾವರ್, ನಿವೃತ್ತ ಖಜಾನೆ ಅಧಿಕಾರಿ ರವಿ ಬೆಳ್ಳಿಮನೆ, ನಿವೃತ್ತ ಸೈನಿಕ ಕೇಶವ ಜಿ. ಹೆಗಡೆ ಹಾಗೂ ಕೆಡಿಸಿಸಿ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಅಶೋಕ್ ಎಸ್. ಪವಾರ್ ಆಯ್ಕೆಯಾಗಿದ್ದಾರೆ.
ನೂತನ ಧರ್ಮದರ್ಶಿಗಳ ಆಯ್ಕೆಯನ್ನು ಭಕ್ತರು ಹಾಗೂ ಸಾರ್ವಜನಿಕರು ಸ್ವಾಗತಿಸಿದ್ದು, ದೇವಸ್ಥಾನದ ಅಭಿವೃದ್ಧಿ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.
