Bhatkal| ಹಿಂದುಗಳ ಧಾರ್ಮಿಕ ನಂಬಿಕೆಯ ದೇವರ ಹೊರೆ ಇಳಿಸುತ್ತಿದ್ದ ಮುರಿನಕಟ್ಟೆ ಮರು ನಿರ್ಮಾಣಕ್ಕೆ ಅಡ್ಡಿ ಮಾಡಿ, ಒಡೆದು ಹಾಕಿದ ಪ್ರಕರಣ ಸಂಬಂಧಿಸಿ ಹಿಂದೂ ಸಂಘಟನೆ ಹಾಗೂ ಬಿಜೆಪಿ ಮುಖಂಡರಿಂದ ಭಾನುವಾರ ರಾತ್ರಿಯೇ ಭಟ್ಕಳ ಪೊಲೀಸ್ ಠಾಣೆಗೆ ಕಾಲ್ನಡೆಯಲ್ಲಿ ತೆರಳಿ ಠಾಣೆಯ ಮುಂದೆ ಧರಣಿ ನಡೆಸಿದ್ದಲ್ಲದೇ ಕೃತ್ಯ ಎಸಗಿದ ಹಾಗೂ ಪೊಲೀಸರನ್ನು ದೂಡಿದ ಮುಸ್ಲಿಮರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಭಟ್ಕಳದ ವೆಂಕಟಾಪುರದ ಜಾಗಟೆ ಕಟ್ಟೆಯಲ್ಲಿದ್ದ ಮುರಿನಕಟ್ಟೆಯನ್ನು ರಾಷ್ಟ್ರೀಯ ಹೆದ್ದಾರಿ ಅಗಲಿಕರಣ ಸಂದರ್ಭದಲ್ಲಿ ತೆರವು ಮಾಡಲಾಗಿತ್ತು. ಸಾಕಷ್ಟು ಸಮಯಗಳ ಕಾಲ ಕಾದು ಇದರ ಮರು ನಿರ್ಮಾಣವನ್ನು ರಾಷ್ಟ್ರೀಯ ಹೆದ್ದಾರಿ ಸುಪರ್ದಿಯಲ್ಲಿರುವ ಜಾಗದಲ್ಲೇ ಭಾನುವಾರ ಹಿಂದು ಸಂಘಟನೆಯವರು ಮಾಡಿದ್ದರು. ಈ ಸ್ಥಳದಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದ ಮುಸ್ಲಿಂ ಸಂಘಟನೆಯಿಂದ ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿ, ಕಟ್ಟೆಯನ್ನು ತೆರವು ಮಾಡಲು ಆಗ್ರಹಿಸಿದ್ದರು. ಏಕಾಏಕಿ ಜಮಾಯಿಸಿದ ಮುಸ್ಲಿಮರು
ಭಾನುವಾರ ಬೆಳಗ್ಗೆ ನಿರ್ಮಾಣ ಮಾಡಿದ್ದ ಮುರಿನಕಟ್ಟೆಯನ್ನು ಒಡೆದು ಹಾಕಿದ್ದರು.
ಈ ಸಂದರ್ಭದಲ್ಲಿ ಕರ್ತವ್ಯದಲ್ಲಿ ಇದ್ದ ಗುಪ್ತಚರ ಇಲಾಖೆಯ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿಯನ್ನು ದೂಡಿ ಮುಸ್ಲಿಂ ಸಮುದಾಯದ ಕೆಲವರು ಹಲ್ಲೆಗೆ ಯತ್ನಿಸಿದ್ದಾರೆ. ಈ ಹಿನ್ನೆಲೆ ಪರಿಸ್ಥಿತಿ ನಿಯಂತ್ರಿಸಲು ಪೋಲಿಸರು ಅವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೋಲಿಸರು ಹೆಚ್ಚಿನ ಕೆಎಸ್ಆರ್ಪಿ ತುಕಡಿಯನ್ನು ಕರೆಯಿಸಿದ್ದು, ಸ್ಥಳದಲ್ಲಿ ಭಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಈ ಎಲ್ಲಾ ಘಟನೆಗಳ ಬಳಿಕ ಮಾಜಿ ಶಾಸಕ ಸುನೀಲ್ ನಾಯ್ಕ್, ಹಿಂದೂ ಮುಖಂಡರಾದ ಗೋವಿಂದ ನಾಯ್ಕ್, ಶ್ರೀಕಾಂತ್ ನಾಯ್ಕ್ ಸೇರಿದಂತೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಭಟ್ಕಳ ಪೊಲೀಸ್ ಠಾಣೆಯವರೆಗೆ ಕಾಲ್ನಡಿಯಲ್ಲಿ ತೆರಳಿ ಅಧಿಕಾರಿಗಳನ್ನು ಭೇಟಿಯಾಗಿ ನ್ಯಾಯಕ್ಕಾಗಿ ಒತ್ತಾಯಿಸಿ ಸ್ಥಳದಲ್ಲೇ ಧರಣಿ ನಡೆಸಿದ್ದಾರೆ. ಅಲ್ಲದೇ, ಮುರಿನಕಟ್ಟೆ ತೆರವು ಮಾಡಿದ ಹಾಗೂ ಪೊಲೀಸರು, ಅಧಿಕಾರಿಯನ್ನು ದೂಡಿ ಹಾಕಿದ ಮುಸ್ಲಿಮರನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
