ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ, ಧಾರವಾಡ ಜಿ.ಪಂ. ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿಗೆ ಸೇರಿ 16 ಮಂದಿ ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಟಿಂಗರೀಕರ್ ಒಬ್ಬರಿಗೆ ಜೀವಾವಧಿ ಸಿಗದೆ 7 ವರ್ಷಗಳ ಜೈಲು ಮತ್ತು 30000 ದಂಡ ಪ್ರಕಟಿಸಲಾಗಿದೆ. ಇದರ ಜೊತೆಗೆ ಉಳಿದ ಅಪರಾಧಿಗಳಿಗೂ ಶಿಕ್ಷೆಯನ್ನು ಪ್ರಕಟ ಮಾಡಿದೆ. 16ಲಕ್ಷ ರೂ. ದಂಡದ ಮೊತ್ತ ವಿಧಿಸಲಾಗಿದ್ದು ಈ ಪರಿಹಾರವನ್ನು ಯೋಗೇಶ್ ಗೌಡ ಮಕ್ಕಳಿಗೆ ಹಾಗೂ ಸಹೋದರ ಗುರುನಾಥ್ ಗೌಡ ಗೆ ನೀಡಲು ಸೂಚನೆ ನೀಡಲಾಗಿದೆ.
