Bhatkal|ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೊಬ್ಬರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ಭಟ್ಕಳ ತಾಲೂಕಿನ ಜಾಲಿಯಲ್ಲಿ ನಡೆದಿದೆ.

ಮೃತರನ್ನು ಜಾಲಿ ಬೀಚ್ ರೋಡ್ ನಿವಾಸಿ ಈರಯ್ಯ ಮೊಗೇರ (65) ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ಈರಯ್ಯ ಎಂದಿನಂತೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಅನಾಹುತವಾಗಿ ಸಮುದ್ರದಲ್ಲಿ ಮುಳುಗಿದರೆಂದು ತಿಳಿದುಬಂದಿದೆ. ಈ ಕುರಿತು ಮೃತರ ಪುತ್ರ ಮನೋಹರ ಮೊಗೇರ ಭಟ್ಕಳ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.