Bhatkal | ಸ್ವಿಪ್ಟ್ ಕಾರಿನಲ್ಲಿ ಗೋವು ಕಳ್ಳತನಕ್ಕೆ ಯತ್ನಿಸಿದ ಕಳ್ಳರನ್ನು ಗ್ರಾಮಸ್ಥರೇ ತಡೆದು ಎರಡು‌ ಗೋವುಗಳ ರಕ್ಷಣೆ ಮಾಡಿದ ಘಟನೆ ಭಟ್ಕಳದ ತಲಗೇರಿಯಲ್ಲಿ ನಡೆದಿದ.

3.45 ರ ನಸುಕಿನ ಜಾವ ಮಲಗಿದ್ದ ಗ್ರಾಮಸ್ಥರಿಗೆ ಗೋವುಗಳ ಆಕ್ರಂದನ ಕೇಳಿಸಿದೆ. ಏನಿರಬಹುದು ಎಂದು ನೋಡಲು ಬಂದ ಗ್ರಾಹಕರಿಗೆ ಗೋ ಕಳ್ಳರ ಕೃತ್ಯ ಗಮನಕ್ಕೆ ಬಂದಿದೆ. ತಕ್ಷಣ ಒಟ್ಟುಗೂಡಿದ ಗ್ರಾಮಸ್ಥರು ಕಾರಿನ್ನು ತಡೆದು ಕಾರಿನ ಗ್ಲಾಸು ಪುಡಿಮಾಡಿದ್ದಾರೆ. ಗ್ರಾಮಸ್ಥರ ದಾಳಿಗೆ ಹೆದರಿ ಗೋ ಕಳ್ಳರು ಓಡಿಹೋಗಿದ್ದಾರೆ. ಕಾರಿನಲ್ಲಿದ್ದ ಆಕಳು ಹಾಗೂ ಕರುವನ್ನು ರಕ್ಷಣೆ ಮಾಡಲಾಗಿದೆ.

ಇನ್ನೂ ಈ ಕೃತ್ಯಕ್ಕೆ ಖದೀಮರ ತಂಡ ಹೈಟೆಕ್ ಕಾರನ್ನ ಬಳಸಿದ್ದು, ಈ ಕಾರಿಗೆ ಎರಡು ನಂರ್ ಪ್ಲೇಟ್ ಗಳ ಬಳಕೆ ಮಾಡಲಾಗಿದೆ. Ka47 N0081 ಹಾಗೂ Ka19 MR 3233 ನಂಬರ್ ಗಳಿರುವ ಎರಡು ನಂಬರ್ ಪ್ಲೇಟ್‌ಗಳಿದ್ದು ಈ ಎರಡು ನಂಬರ್ ಪ್ಲೇಟ್ ಗಳಲ್ಲಿ ಅಸಲಿ ಯಾವುದು ನಕಲಿ ಯಾವುದು ಎಂದು ತನಿಖೆಯಿಂದಲೇ ತಿಳಿದುಬರಬೇಕಾಗಿದೆ.

ಊರಿನಲ್ಲಿರುವ ಬೀಡಾಡಿ ದನಗಳೇ ಈ ಖದೀಮರ ಟಾರ್ಗೇಟ್. ರಾತ್ರಿ ಸಮಯದಲ್ಲಿ ಎಲ್ಲರೂ ಮಲಗಿರುವಾಗ ಈ ಗೋಕಳ್ಳರ ತಂಡ ಗೋ ಕಳ್ಳತನಕ್ಕೆ ಇಳಿಯುತ್ತಾರೆ. ಭಟ್ಕಳದಲ್ಲಿ ಗೋ ಕಳ್ಳತನ ನಿರಂತರವಾಗಿ ನಡೆಯುತ್ತಿದ್ದು, ಕೆಲವೊಂದು ಪ್ರಕರಣಗಳು ಮಾತ್ರ ಬೆಳಕಿಗೆ ಬರುತ್ತಿದೆ. ಆ ಹಿನ್ನೆಲೆಯಲ್ಲಿ ಪೊಲಿಸ್ ಇಲಾಖೆ ರಾತ್ರಿ ಸಂಬರ್ಧದಲ್ಲಿ ಬೀಟ್ ಪೊಲಿಸರ ನಿಯೋಜನೆ ಕ್ರಮಬದ್ಧವಾಗಿ ಮಾಡಬೇಕು ಎಂದು ಗೋರಕ್ಷರು ಆಗ್ರಹಿಸಿದ್ದಾರೆ. ಇನ್ನೂ ಈ ಗೋ ಕಳ್ಳತನ ಪ್ರಕರಣ ಭಟ್ಕಳ ನಗರ ಪೊಲಿಸ್ ಠಾಣೆಯಲ್ಲಿ ದಾಖಲಾಗಿದ್ದು ಪರಾರಿಯಾದ ಆರೋಪಿಗಳ ಬಂಧನಕ್ಕೆ ಪೊಲಿಸರು ಬಲೆ ಬೀಸಿದ್ದಾರೆ.