Karwar| ರಾತ್ರಿ ಹೊತ್ತಿನಲ್ಲಿ ‘ಎಣ್ಣೆ ಏಟು’ ಜಾಸ್ತಿಯಾದಾಗ ಕೆಲವರು ತಮ್ಮ ಆತ್ಮೀಯರಿಗೆ, ಇನ್ನೂ ಕೆಲವರು ಸ್ನೇಹಿತರಿಗೆ ಕಾಲ್ ಮಾಡಿ ಹೃದಯದ ಮಾತು ಹಂಚಿಕೊಳ್ಳುವುದು ಹೊಸದೇನಲ್ಲ. ಆದರೆ ಕಾರವಾರದಲ್ಲಿ ಮಾತ್ರ ಕೆಲವರು ನೇರವಾಗಿ ಮಾಜಿ ಸಚಿವರಿಗೇ ಕಾಲ್ ಮಾಡ್ತಾರಂತೆ!

ರವಿವಾರ ಕಾರವಾರದಲ್ಲಿ ನಡೆದ ಜನತಾದಳ ಕಾರ್ಯಕಾರಿಣಿ ಸಭೆಯಲ್ಲಿ  ಮಾಜಿ ಸಚಿವ ಆನಂದ ಅಸ್ನೋಟಿಕರ್,  ಕಾರ್ಯಕರ್ತರು ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಸೂರಜ್ ಸೋನಿ ಎದುರೇ, ತನಗೆ ಕೆಲವರು ಎಣ್ಣೆ ಹಾಕಿಕೊಂಡು ಕಾಲ್ ಮಾಡ್ತಾರೆ ಎಂದು ಅಲವತ್ತುಕೊಂಡಿದ್ದಾರೆ.

 ‘ಕೆಲವರು ಹಾಕೊಂಡು ಫೊನ್ ಮಾಡ್ತಾರೆ, ತೊಂದರೆಯಿಲ್ಲ… ಮಾಡಲಿ…ತನಗೆ ಯಾವ ಸಮಸ್ಯೆಯೂ ಇಲ್ಲ. ತಾನೂ ಮಾತಾಡುತ್ತೇನೆ ಎಂದು ಹೇಳಿದ ಅಸ್ನೋಟಿಕರ್ ಯಾರೇ ಫೋನ್ ಮಾಡಿದ್ರೂ, ಯಾವುದೇ ಸ್ಥಿತಿಯಲ್ಲಿ ಕಾಲ್ ಮಾಡಿದ್ರೂ ತಾನು ಮಾತನಾಡುತ್ತೇನೆ ಎಂಬ ಸಂದೇಶ ಕೊಟ್ಟಿದ್ದಾರೆ.

ಮಾಜಿ ಸಚಿವ ಅಸ್ನೋಟಿಕರ್ ಹೀಗೆ ಮಾತನಾಡುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ‌ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ ಒಬ್ಬ ಮಾಜಿ ಸಚಿವರಿಗೆ ‌ಎಣ್ಣೆ‌ ಹಾಕಿಕೊಂಡು ಕಾಲ್ ಮಾಡುವವರು ಯಾರು? ಪಕ್ಷದ ಕಾರ್ಯಕರ್ತರಾ? ಹಳೆಯ ಸ್ನೇಹಿತರಾ? ಇಲ್ಲವೇ ‘ಸೀಕ್ರೆಟ್ ಫ್ಯಾನ್ಸ್’ನಾ? ಎಂಬ ಉತ್ತರ ಇಲ್ಲದ ಪ್ರಶ್ನೆ ಮಾತ್ರ  ಸದ್ಯ ಕಾರವಾರದ Talk of the Town ಆಗಿದೆ.

ಮಾಜಿ ಸಚಿವರು ಯಾರೇ ಕಾಲ್ ಮಾಡಿದ್ರೂ, ಎಣ್ಣೆ ಹಾಕಿಕೊಂಡು ಮಾತಾಡಿದ್ರೂ ತಾನು ಮಾತಾಡ್ತೇನೆ ಎಂದು ಹೇಳಿದ್ದರಿಂದ, ನಾವೂ ಒಂದು ಕೈ ನೋಡೆ‌ ಬಿಡೋಣ ಅನ್ನುತ್ತಾ, ಎಣ್ಣೆ ಹಾಕಿಕೊಂಡು ಅಸ್ನೋಟಿಕರ್ ಅವರಿಗೆ ಫೋನ್ ಮಾಡಲು ಮಾತ್ರ ಹೋಗಬೇಡಿ‌ ಎಂಬುದು ನಮ್ಮ ಕಳಕಳಿ ಅಷ್ಟೇ!