Haliyal| ಖೈದಿ ಬಳಿಯೇ ಲಂಚಕ್ಕೆ ಕೈವೊಡ್ಡಿದ್ದ ಜೈಲರ್ ಲೋಕಾಯಕ್ತ ಬಲೆಗೆ ಬಿದ್ದ ಘಟನೆ ಹಳಿಯಾಳದಲ್ಲಿ ನಡೆದಿದೆ.
ಹಳಿಯಾಳದ ಉಪ ಬಂಧಿಖಾನೆಯ ಜೈಲರ್ ಕಲ್ಲಪ್ಪ ಗಸ್ತಿ ಎಂಬುವವರೇ ಲೋಕಾಯುಕ್ತ ಬಲೆಗೆ ಬಿದ್ದ ಪುಣ್ಯಾತ್ಮ.

ಜೈಲಿನಲ್ಲಿ ಕೆಲಸ ಮಾಡಿದ್ದ ಖೈದಿ ರಾಜ್ ಕುಮಾರ್ ಗೆ ಸರ್ಕಾರದಿಂದ 1.75 ಲಕ್ಷ ಹಣ ಬಿಡುಗಡೆಯಾಗಿತ್ತು. ಕೈದಿಗೆ ಸರ್ಕಾರದಿಂದ ಬಂದ ಈ ಹಣ ನೀಡಲು ಜೈಲರ್ ಕಲ್ಲಪ ಗಸ್ತಿ 60 ಸಾವಿರ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಮುಂಗಡವಾಗಿ ಹತ್ತು ಸಾವಿರವನ್ನು ಫೋನ್ ಪೇ ಮೂಲಕ ಜೈಲರ್ ಕಲ್ಲಪ್ಪ ಗಸ್ತಿ ಪಡೆದಿದ್ದ ಎನ್ನಲಾಗಿದೆ.
ಕಾರವಾರ ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯಕ ಹಾಗೂ ಇನ್ಸಪೆಕ್ಟರ್ ವಿನಾಯಕ ಬಿಲ್ಲವ ನೇತೃತ್ವದಲ್ಲಿ ದಾಳಿ ನಡೆಸಿ ಗಸ್ತಿಯನ್ನು ಬಲೆಗೆ ಕೆಡವಿದ್ದಾರೆ.
ಕಲ್ಲಪ್ಪ ಗಸ್ತಿಯನ್ನ ವಶಕ್ಕೆ ಪಡೆದು ಲೋಕಾಯುಕ್ತರು ವಿಚಾರಣೆ ಕೈಗೊಂಡಿದ್ದಾರೆ.
